ಓಡಿಶಾ ಭುವನೇಶ್ವರದ ಐಐಟಿಗೆ ಆದಿತ್ಯ ತಳವಾರ ಆಯ್ಕೆ
ವಿಜಯಪುರ,ಜೂ.23:ಶ್ರೀ ಸಿದ್ಧೇಶ್ವರ ಸಂಸ್ಥೆಯ ಕವಲಗಿ ಸಂಗನಬಸವ ವಸತಿ ಪದವಿ ಪೂರ್ವ ಕಾಲೇಜ ವಿದ್ಯಾರ್ಥಿ ಆದಿತ್ಯ ತಳವಾರ ಜೆ.ಇ.ಇ. ಅಡ್ವಾನ್ಸ್‍ಡ್-2024 ಪರೀಕ್ಷೆಯಲ್ಲಿ ಶೇ. 87ರಷ್ಟು ಅಂಕ ಗಳಿಸಿ ಓಡಿಶಾ ಭುವನೇಶ್ವರದ ಐ.ಐ.ಟಿ. ಗೆ ಆಯ್ಕೆಯಾಗಿದ್ದಾರೆ.
ಅವರ ಈ ಅಪೂರ್ವ ಸಾಧನೆಯನ್ನು ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ (ಯತ್ನಾಳ), ಚೇರಮನ್ ಬಸಯ್ಯ ಹಿರೇಮಠ ಹಾಗೂ ಸಂಸ್ಥೆಯ ಸಮಸ್ತ ನಿರ್ದೇಶಕರು ಮತ್ತು ಸದಸ್ಯರು ಪ್ರಶಂಸಿಸಿದ್ದಾರೆ.
ಕಾಲೇಜಿನ ಪ್ರಾಚಾರ್ಯ ಹೇಮಂತ ಕೃಷ್ಣ ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.