ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯ : ರಾಜು ಪೂಜಾರಿ
ಹುಮನಾಬಾದ್ : ಜೂ23 : ಪರಿಸರ ಅಸಮತೋಲನ ಹೊಗಲಾಡಿಸಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಮರ-ಗಿಡಗಳನ್ನು ಬೆಳಸಿ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಪತ್ರಕರ್ತ ರಾಜು ಪೂಜಾರಿ ಹೇಳಿದರು.
ತಾಲೂಕಿನ ಗಡವಂತಿ ಗ್ರಾಮದ ಮುಗ್ದ ಸಂಗಯ್ಯ ಗವಿ ಆವರಣದಲ್ಲಿ ನಡೆದ ವೀರಭದ್ರೇಶ್ವರ ಪದವಿ ಕಾಲೇಜಿನ 2023-24ನೇ ಸಾಲಿನ ಅಂತಿಮ ವರ್ಷದ ವಿದ್ಯಾರ್ಥಿಗಳ ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಭೂತಾಪಮಾನ ಹೆಚ್ಚಳದಿಂದಾಗಿ ಹಲವಾರು ಪ್ರಕೃತಿ ವಿಕೋಪಗಳ ಸಂಭವಿಸುವ ಸೂಚನೆ ಪರಿಸರ ತಜ್ಞರು ನೀಡಿದ್ದಾರೆ. ಭೂತಾಪಮಾನ ಕಡಿಮೆ ಆದರೆ ಮಾತ್ರ ನಮಗೆ ಭೂಮಿ ಮೇಲೆ ಜೀವಿಸಲು ಸಾಧ್ಯವಾಗುತ್ತದೆ. ಪರಿಸರ ಸಮತೋಲನ ಕಾಪಾಡುವಲ್ಲಿ ವನ್ಯ ಜೀವಿಗಳ ಪಾತ್ರ ಮಹತ್ವ ಪಡೆದುಕೊಂಡಿವೆ. ವನ್ಯ ಜೀವಿಗಳು ಪ್ರಕೃತಿ ವಿಕೋಪಗಳನ್ನು ಸಂಭವಿಸುವ ಮುನ್ಸೂಚನೆ ಅರಿಯುವ ಅದ್ಭೂತ ಶಕ್ತಿ ಹೊದ್ದಿವೆ. ಹೀಗಾಗಿ ವನ್ಯ ಪ್ರಾಣಿಗಳನ್ನು ಕೂಡ ಸಂರಕ್ಷಣೆ ಮಾಡಬೇಕು ಎಂದರು.
ವೀರಭದ್ರೇಶ್ವರ ಪದವಿ ಪ್ರಾಂಶುಪಾಲ ರವೀಂದ್ರನಾಥ ಮಾತನಾಡಿ, ಮೂಲಭೂತ ಸೌಕರ್ಯಗಳ ಕುರಿತು ಸಮಿಕ್ಷೆ ಮಾಡುವ ಮೂಲಕ ಕ್ಷೇತ್ರದ ಶಾಸಕರಿಗೆ ಹಾಗೂ ತಾಲೂಕ ಆಡಳಿತಕ್ಕೆ ವರದಿ ಸಲ್ಲಿಸುತ್ತಿರುವುದು ಶ್ಲಾಘನಿಯ. ಗ್ರಾಮದಲ್ಲಿ ವಿದ್ಯಾರ್ಥಿಗಳು ಸ್ವಚ್ಛತೆ, ಸಸಿ ನೆಡುವ ಕಾರ್ಯ ಮಾಡುತ್ತಿದ್ದಾರೆ. ಇದೊಂದು ಮಾದರಿಯ ಶಿಬಿರ ಮಾಡುವ ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಪತ್ರಕರ್ತ ಶಿವಶರಣ ಚಾಂಗಲೇರಿ, ಡಾ. ವಿಕಾಸ ಪೆÇೀಸ್ತಾರ್, ಸಂತೋಷ ಭೂಶಟ್ಟಿ, ಪ್ರವೀಣ ಕಲಬುರ್ಗಿ, ಡಾ. ಅರವಿಂದ ರಾಠೋಡ ಇದ್ದರು.