ರಸ್ತೆ ಸಂಪರ್ಕ ಒದಗಿಸಲು ವಿಶ್ವಕರ್ಮ ಸಮಾಜದಿಂದ ಜಿಲ್ಲಾಧಿಕಾರಿಗಳಿಗೆ ಮನವಿ
ಬೀದರ ಃ ಜೂ.23:ತಾಲೂಕಿನ ಚೌಳಿಗ್ರಾಮದ ವ್ಯಾಪ್ತಿಯಲ್ಲಿ ಬರುವ ನೌಬಾದನಗರದ ಹತ್ತಿರದಲ್ಲಿ ವಿಶ್ವಕರ್ಮ ಸಮಾಜದ ವಿಶ್ವಕರ್ಮ ಧರ್ಮ ವರ್ಧನಿ ಸಂಘಕ್ಕೆ ಸರ್ಕಾರದ ವತಿಯಿಂದ ನಿವೇಶನ ಹಂಚಿಕೆ ಮಾಡಲಾಗಿದ್ದು, ಸಮುದಾಯ ಭವನ ನಿರ್ಮಾಣ ಕಾಮಗಾರಿ ಪ್ರಗತಿ ಹಂತದಲ್ಲಿದೆ. ಆದರೆ ಸದರಿ ಸಮುದಾಯ ಭವನಕ್ಕೆ ಹೋಗುವ ಮಾರ್ಗಮಧ್ಯದಲ್ಲಿ ಅರಣ್ಯ ಇಲಾಖೆಯವರು ಸುತ್ತುಗೋಡೆ ನಿರ್ಮಾಣ ಮಾಡಿದ್ದರಿಂದ ಸಂಕಷ್ಟ ಎದುರಾಗಿದೆ. ಈ ಸಂಬಂಧ ವಿಶ್ವಕರ್ಮ ಸಮಾಜದ ಮುಖಂಡರು ದಿನಾಂಕ:20.06.2024 ರಂದು ಮಾನ್ಯ ಜಿಲ್ಲಾಧಿಕಾರಿಗಳು, ಬೀದರ ರವರಿಗೆ ಮನವಿ ಪತ್ರ ಸಲ್ಲಿಸಿ, ಅರಣ್ಯ ಇಲಾಖೆಯವರು ನಿರ್ಮಿಸಿರುವ ಸುತ್ತುಗೋಡೆಯನ್ನು 25 ಅಡಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ವಿನಂತಿಸಲಾಗಿದೆ.
ಇದಕ್ಕೂ ಮುಂಚೆ ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ಸದರಿಯವರು ನಮ್ಮ ಮನವಿಗೆ ಸ್ಪಂದಿಸದೆ, ಜಿಲ್ಲಾಡಳಿತದಲ್ಲಿಯೇ ರಸ್ತೆಯ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಹೇಳಿರುತ್ತಾರೆ.
ಸಮಾಜಕ್ಕೆ ಆಗುತ್ತಿರುವ ರಸ್ತೆ ಸಮಸ್ಯೆಯನ್ನು ಸರಿಪಡಿಸಿಲು ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆಯವರೊಂದಿಗೆ ಸಮಾಲೋಚಿಸಿ ಸಂಚಾರಕ್ಕೆ ಅನುವು ಮಾಡಿಕೊಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷರು ಹಾಗೂ ಹಿರಿಯ ಮುಖಂಡರು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ವಿನಂತಿಸಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಸಮಿತಿಯ ಅಧ್ಯಕ್ಷರಾದ ಮಹೇಶ ಪಾಂಚಾಳ, ಪ್ರಧಾನ ಕಾರ್ಯದರ್ಶಿ ಶಿವಾನಂದ ವಿಶ್ವಕರ್ಮ, ಧರ್ಮವರ್ಧಿನಿ ಸಂಘದ ಅಧ್ಯಕ್ಷರಾದ ಶ್ರೀನಿವಾಸ ವಿಶ್ವಕರ್ಮ, ನಾರಾಯಣರಾವ, ರಘುನಾಥರಾವ, ಸಂಜುಕುಮಾರ, ಪಾಂಡುರಂಗ ಮನ್ನಳ್ಳಿ, ವಿಶ್ವನಾಥ ಲಾಧಾ, ಶ್ರೀನಿವಾಸ ಪೆÇದ್ದಾರ, ಶಾಮಣ್ಣಾ ವಿಶ್ವಕರ್ಮ, ವೈಜಿನಾಥ ಗುಮ್ಮಾ, ಶ್ರೀಕಾಂತ, ವೀರಶೆಟ್ಟಿ, ನಾಗನಾಥ, ಬಾಬುರಾವ, ಪಾಂಡುರಂಗ ಮತ್ತಿತರರು ಉಪಸ್ಥಿತರಿದ್ದರು.