ರೈತ ಉತ್ಪಾದಕರ ನಿರ್ದೇಶಕರಿಗೆ ಮತ್ತು ಶೇರುದಾರರಿಗೆತರಬೇತಿ ಕಾರ್ಯಾಗಾರ
ಬೀದರ :ಜೂ.23: ತೋಟಗಾರಿಕೆ ಮಹಾವಿದ್ಯಾಲಯ ಬೀದರ್, ರಿಲಯನ್ಸ್ ಫೌಂಡೇಶನ್ ಮತ್ತು ಔಟರಿಚ್ ಸಂಸ್ಥೆ ಬೀದರ ಇವರ ಸಹಯೋಗದಲ್ಲಿ, ರೈತ ಉತ್ಪಾದಕರ ಕಂಪನಿಯ ನಿರ್ದೇಶಕರಿಗೆ ಮತ್ತು ಶೇರುದಾರರಿಗೆ ಮಾರ್ಕೆಟಿಂಗ್ ಮತ್ತು ನೆಟ್ವಕಿರ್ಂಗ್ ಕುರಿತು ತರಬೇತಿ ಕಾರ್ಯಾಗಾರ ಜರುಗಿತು.
ಸಾಮಾನ್ಯ ರೆ?ತರು ನೇರ ಮಾರುಕಟ್ಟೆಯಲ್ಲಿ ವಸ್ತುಗಳ ಖರೀದಿ, ಮತ್ತು ಕೃಷಿ ಉತ್ಪನ್ನ ಮಾರಾಟಕ್ಕಾಗಿ ಮಧ್ಯವರ್ತಿಗಳನ್ನು ಅವಲಂಬಿಸಿದ್ದಾರೆ, ಇದರಿಂದಾಗಿ ಕನಿಷ್ಠ 3 ಹಂತಗಳ ಕಮಿಷನ ಹಣವನ್ನು ವಿನಾಕಾರಣ ರೈತರು ಕಳೆದುಕೊಳ್ಳಬೇಕಾಗುತ್ತಿದೆ. ಕನಿಷ್ಠ ಶೇ.40ರಿಂದ 60 ಲಾಭಾಂಶದಲ್ಲಿ ರೈತರಿಗೆ ಹೊಡೆತ ಎದುರಾಗುತ್ತದೆ. ಎಫ್‍ಪಿಒಗಳಿಂದಾಗಿ ರೈತರಿಗೆ ಈ ನಷ್ಟ ಉಳಿಕೆಯಾಗುತ್ತಿದೆ. ರೈತ ಉತ್ಪಾದಕರ ಸಂಸ್ಥೆ'(ಎಫ್‍ಪಿಒ)ಗಳು ಕೃಷಿಕರಿಗೆ ವರದಾನವಾಗಿದೆ ಎಂದು ಎಸ್.ವಿ ಪಾಟೀಲ ತಿಳಿಸಿದರು.
ಔಟರಿಚ್ ಸಂಸ್ಥೆಯ ಜಿಲ್ಲಾ ಯೋಜನಾಧಿಕಾರಿ ಕೃಷ್ಣ ವೈ.ಟಿ ಅವರು ಮಾತನಾಡಿ ರಸಗೊಬ್ಬರ, ಕೀಟನಾಶಕ ಕಳೆನಾಶಕ ಬಳಕೆ ಹಾಗೂ ಖರೀದಿ ಕುರಿತಂತೆ ರೈತರಿಗೆ ಈ ಮೊದಲಿನಿಂದಲೂ ಮಾಹಿತಿಯ ಕೊರತೆ ಇದೆ ಸ್ಥಳಿಯ ರಸಗೊಬ್ಬರ ಹಾಗೂ ಕಿಟನಾಶಕ ಮಾರಾಟಗಾರರು ಸೂಚಿಸಿದ ಗೊಬ್ಬರ ಇತ್ಯಾದಿ ವಸ್ತುಗಳನ್ನು ಅವರು ಹೇಳಿದ ದರಕ್ಕೆ ರೈತರು ಖರೀದಿ ಮಾಡುತ್ತಾರೆ, ಆದರೆ ಈಗ ರೈತ ಉತ್ಪಾದಕರ ಸಂಘಗಳಿಂದ ರೈತರು ಉತ್ಪಾದಕರ ಕಂಪನಿಯಿಂದ ಮಾಹಿತಿ ಪಡೆದು ನೇರವಾಗಿ ಪಡೆಯುವಂತಾಗಿದೆ ಇದರಿಂದ ರೈತರಿಗೆ ಅನುಕೂಲವಾಗಿದೆ ಎಂದರು.
ಈ ಸಂದರ್ಭದಲ್ಲಿ ಸೇಲ್ಕೋ ಫೌಂಡೇಷನ್ ಸಂಸ್ಥೆಯ ಜಿ.ದೊಡ್ಡಮನಿ, ಮಹಿಂದ್ರಾ ಐಂಡ ಮಹಿಂದ್ರಾ ಕಂಪನಿಯ ಪವನ ನಾಯ್ಕ, ತೋಟಗಾರಿಕೆ ಮಹಾವಿದ್ಯಾಲಯದ ಪ್ರಾಧ್ಯಾಪಕ ಅಶೋಕ ಸೂರ್ಯವಂಶಿ, ಡಾ. ವೀರೇಶ ಕಡ್ಲಿ, ರಘುನಾಥ, ಲಕ್ಷ್ಮಿಕಾಂತ, ಧನರಾಜ, ಶಿವಕುಮಾರ ಬೀರಾದರ, ಕಲ್ಲಪ್ಪಾ ಹುಗ್ಗೆ,ದೇವದಾಸ ಸಿಂದೆ,ಅಯುಬ ಪಾಟೀಲ್,ಗಣಪತಿ ಸಿಮ್ಟೆ, ಏಫ್.ಪಿಒ ಷೇರುದಾರರು ಪಾಲ್ಗೊಂಡಿದ್ದರು.