ಆಲಮೇಲದಲ್ಲಿ ಕಾರಹುಣ್ಣಿಮೆ ಸಂಭ್ರಮ
ಆಲಮೇಲ : ಜೂ.23: ಪಟ್ಟಣದಲ್ಲಿ ಬೆಳಿಗ್ಗೆಯಿಂದ ಮದ್ಯಾಹ್ನ 2 ಗಂಟೆಯವರೆಗೆ ಎತ್ತಿನ ಬಂಡಿಗೆ ಸ್ಪರ್ಧೆ ಮಾಡುವ ಎತ್ತುಗಳಿಗೆ ಹಾಗೂ, ಓಟದ ಸ್ಪರ್ಧಿಸುವ ಎತ್ತುಗಳಿಗೆ ರೈತರು ಪೂಜಾ ಕೈಂಕರ್ಯಗಳನ್ನು ಮಾಡಿ ಸ್ಪರ್ಧೆಗೆ ಅಣಿಮಾಡಿ ಸಾಯಂಕಾಲ 4-00 ಗಂಟೆಗೆ ಪಟ್ಟಣದ ದೇಶಮುಖ್ ಮನೆತನದ ಲಷ್ಮೀ ಬಂಡಿಗೆ ಮುತ್ತು ಹಾಗೂ ಖಂಡು ಲವಟೆ, ಬಂಡಿಗೆ ಎತ್ತುಗಳನ್ನು ಕಟ್ಟಿ ಎರಡು ಮನೆತನದ ನೂರಾರು ಬಾಬತ್ತುದಾರರು ವಾಧ್ಯ ವೈಭವದೊಂದಿಗೆ ಪೀರ್ ಗಾಲೀಸಾಬ್ ವಿಶಾಲವಾದ ಮೈದಾನದಲ್ಲಿ ಐದು ಸುತ್ತು ಬಂಡಿಯನ್ನು ಈರಣ್ಣ ಗುರಕಾರ್ ಓಡಿಸಿದರು. ಬಳಿಕ ಚಿಕ್ಕ ಚಿಕ್ಕ ಚಕ್ಕಡಿಗಳು, ಓಟದ ಸ್ಪರ್ಧೆಯನ್ನು ಇಲ್ಲಿನ ರೈತಾಪಿಗಳು ನೋಡಿ ಸಂಭ್ರಮಿಸಿದರು. ಬಳಿಕ ದೇವರ ಅಗಸಿಯಲ್ಲಿ ಕರಿಯನ್ನು ಹರಿದರು.ಪಟ್ಟಣದ ಪೋಲೀಸ್ ಇಲಾಖೆ ಸೂಕ್ತವಾದ ಬಂದೋಬಸ್ತ್ ಈರ್ಪಡಿಸಿದರು. ಈ ಸಂದರ್ಭದಲ್ಲಿ ರೈತರಾದ ಸಿದ್ದರಾಯ ತಳವಾರ, ಸಂತೋಷ ಸಮಗಾರ್, ಶ್ರೀಧರ್ ಕುರಬತಹಳ್ಳಿ, ಪಂಡಿತ ಬಂಡಗಾರ್, ಹೊನ್ನಪ್ಪ ಗುರುಕಾರ್, ಬಸವರಾಜ ಗೂಗಾಡಿ, ಇಮಾಮ್ ಸಾಬ್ ಮೇಲಿನಮನಿ, ಬೀರಪ್ಪ ಪೂಜಾರಿ, ನಾಗಪ್ಪ ತಳವಾರ, ಸಿದ್ದಪ್ಪ ಕನ್ನೋಳ್ಳಿ , ಶಿವು ಗುರುಕಾರ್, ಭೀಮ್ ಮೇಲಿನಮನಿ, ಮೈಬೂಬ್ ಸುಂಬಡ್ ಅನೇಕ ಸುತ್ತಮುತ್ತಲಿನ ರೈತರು ಹಾಗೂ ಬಾಬತ್ತುದಾರರು ಗ್ರಾಮದ ರೈತ ಬಾಂಧವರು ಇದ್ದರು.