ನಮ್ಮ ಸಾಧನೆಗಳೆ ಸದ್ದುಮಾಡಬೇಕು: ಮೀನಾ ಚಂದಾವರಕರ್
ಕಲಬುರಗಿ:ಜೂ.23: ಮಹಿಳೆ ಸದ್ದಿಲ್ಲದೆ ಸಾಧಿಸಬೇಕು ಅವಳ ಸಾಧನೆಯೆ ಸದ್ದುಮಾಡಬೇಕು ಇಂದು ಎಲ್ಲಾ ರಂಗದಲ್ಲಿ ಯಶಸ್ವಿಯಾಗಿ ಮಹಿಳೆ ತನ್ನ ಪಾತ್ರ ನಿರ್ವಹಿಸುತ್ತಾ ಬರುತ್ತಿದ್ದಾಳೆ ಎಂದು.ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವಿದ ವಿಶ್ರಾಂತ ಕುಲಪತಿಗಳಾದ ಪೆÇ್ರ.ಮೀನಾ ಚಂದಾವರಕರ್ ಹೇಳಿದರು
ಅವರು ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗ ಹಾಗೂ ಭಾರತೀಯ ಶಿಕ್ಷಣ ಮಂಡಲ ಉತ್ತರ ಪ್ರಾಂತ, ಕಲಬುರಗಿ ಜಿಲ್ಲೆ ಇವರ ಸಹಯೋಗದಲ್ಲಿ ಆಯೋಜಿಸಿದ್ದ “ಸಮರ್ಥ ಮಹಿಳೆ- ಸಶಕ್ತ ಭಾರತ” ( ವಿಕಸಿತ ಭಾರತಕ್ಕಾಗಿ ಮಹಿಳೆಯರು) ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು, ಮುಂದುವರೆದು ಮಾತನಾಡಿದ ಅವರು ಸಮಾಜ,ರಾಜ್ಯ,ರಾಷ್ಟ್ರದ ಅಭಿವೃದ್ದಿಗಾಗಿ ಮಹಿಳೆಯರು ಕಾರ್ಯ ನಿರ್ವಹಿಸುವದು ಅವಶ್ಯವಾಗಿದೆ ಎಂದರು. ಕಾರ್ಯಕ್ರಮವನ್ನು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಡಗಂಚಿಯ ಆಂಗ್ಲ ವಿಭಾಗದ ಮುಖ್ಯಸ್ಥರಾದ ಪೆÇ್ರ.ಬಸವರಾಜ ಡೋಣುರ ಉದ್ಘಾಟಿಸಿದರು,ಸಮರ್ಥವಾಗಿ ಮಹಿಳೆಯರು ಕೆಲಸ ನಿರ್ವಹಿಸಲು ಸಮಾಜ ಸಹಕರಿಸಬೇಕು ಅಂದಾಗ ಮಾತ್ರ ದೇಶ ಸಶಕ್ತವಾಗುವದು ಎಂದರು. ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ರಾಜೇಂದ್ರ ಕೊಂಡಾ ವಹಿಸಿಕೊಂಡು ಮಾತನಾಡುತ್ತಾ ಇಂದು ಮಹಿಳೆಯರನ್ನು ಸಶಕ್ತ ಗೊಳಿಸುವದು ಅವಶ್ಯ ಆ ದಿಸೆಯಲ್ಲಿ ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಆಯೋಜಿಸುವದು ಅವಶ್ಯಕ ಎಂದು ಹೇಳಿದರು ವೇದಿಕೆಯಲ್ಲಿ ಎಸ್.ಬಿ.ಕಲಾ ಕಾಲೇಜಿನ ಪ್ರಾಚಾರ್ಯರಾದ ಡಾ.ಸುರೇಶ ನಂದಗಾಂವ್ ಭಾ.ಶಿ.ಮಂಡಳಿಯ ಡಾ.ಪಲ್ಲವಿ ಪಾಟೀಲ ಉಪಸ್ಥಿತರಿದ್ದರು.ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಮಹೇಶ ಗಂವ್ಹಾರ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು, ಕುಮಾರಿ,ಸಾಕ್ಚಿತಾ ಪ್ರಾರ್ಥಿಸಿದರು, ಉಪನ್ಯಾಸಕರಾದ ಶ್ರೀಮತಿ ಗೀತಾ ಪಾಟೀಲ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.ಬಿ.ಎ.ಅಂತಿಮ ವರ್ಷದ ಕು.ಶಾಂತಮ್ಮ ವಂದಿಸಿದರು
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ – ಬೋಧಕೇತರ ಸಿಬ್ಬಂದಿ ಹಾಗೂ ವಿಭಾಗದ ವಿದ್ಯಾರ್ಥಿನಿಯರು ,ಭಾ.ಶಿ.ಮಂಡಲದ ಪದಾಧಿಕಾರಿಗಳು ,ಸದಸ್ಯರು ಭಾಗವಹಿಸಿದ್ದರು.