ಯಾರ ಬಿಡೆಗೂ ಬೀಳದ ಲೇಖಕ ಉಪ್ಪಿನ
ಆಲಮೇಲ:ಜೂ.23: ಕನ್ನಡ ಕಾದಂಬರಿಗಳಲ್ಲಿ ವಾಸ್ತವ ಪ್ರಜ್ಞೆಯ ನಿರೂಪಣೆಲ್ಲಿ ನೈಜ ಸಂಗತಿಗಳನ್ನು ಮರೆ ಮಾಚಲಾಗಿದೆ ಎಂದು ಯುವ ಸಾಹಿತಿ ಪ್ರಾಧ್ಯಾಪಕ ಸಿ.ಎಂ.ಬಂಡಗರ ಹೇಳಿದರು.
ಅವರು ಪಟ್ಟಣದ ಶ್ರೀಗುರು ಸಂಸ್ಥಾನ ಹಿರೇಮಠದಲ್ಲಿ ನಡೆದ ಸಿದ್ಧಲಿಂಗ ಶಿವಾಚಾರ್ಯರ 67ನೇ ಪುಣ್ಯ ಸ್ಮರಣೆ ನಿಮಿತ್ತ ಹಮ್ಮಿಕೊಂಡಿದ್ದ ಸಂಗೀತ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬೆರಗು ಪ್ರಕಾಶನದ ಸಿದ್ಧರಾಮ ಉಪ್ಪಿನ ಅವರ ದೀಪ ಹಚ್ಚುವ ಸಮಯ ಕಾದಂಬರಿಯನ್ನು ಪರಿಚಯಿಸಿ ಮಾತನಾಡಿದರು,
ಇಂದು ಸಾಹಿತ್ಯದಲ್ಲಿ ಭ್ರಾಮಕ ಸಂಗತಿಗಳನ್ನು ಹೆಚ್ಚು ಅನಾವರಣವಾಗುವ ಹೊತ್ತಲ್ಲಿ ನಿಜಸಂಗತಿಗಳನ್ನು ಹಿಡಿದಿಡುವವರು ಲೇಖಕಕರು ತೀರ ವಿರಳ ಅಂತಹ ಅಪರೂಪದ ಲೇಖಕರಲ್ಲಿ ಸಿದ್ಧರಾಮ ಉಪ್ಪಿನ ಅವರು ಪ್ರಮುಖರಾಗುತ್ತಾರೆ.
ಆಲಮೇಲ ಪರಿಸರದಲ್ಲಿನ ಘಟನೆಗಳನ್ನು ಹೆಸರು ಸಮೇತ ದಾಖಲಿಸುವುದು ಕಷ್ಟ ಮತ್ತು ತೊಂದರೆದಾಯಕ ಕಾರ್ಯವಾಗಿದ್ದರೂ ಯಾರ ಬಿಡೆಗೂ ಅಂಜದೆ ನೈಜತೆಯನ್ನು ಪ್ರದರ್ಶಿಸಿದ್ದಾರೆ ಎಂದರು,
ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ ‘ ಸಂಗೀತ ಮತ್ತು ಸಾಹಿತ್ಯ ವ್ಯಕ್ತಿಯ ಚೇತೂಹಾರಿಯನ್ನಾಗಿ ರೂಪಿಸುತ್ತದೆ. ಆ ಕಾರಣಕ್ಕೆ ಪುಸ್ತಕ ಓದುವುದು ಮತ್ತು ಸಂಗೀತ ಆಲಿಸುವುದಕ್ಕೂ ಸಮಯ ನೀಡುವುದು ಅಗತ್ಯವಾಗಿದೆ ಎಂದರು. ಪಂಚಾಕ್ಷರಿ ಗವಾಯಿಗಳು ಹಾಗೂ ಪುಟ್ಟರಾಜ ಕವಿಗವಾಯಿಗಳು ಸಾಹಿತ್ಯ ಸಂಗೀತ ಎರಡನ್ನೂ ನಿರ್ವಹಿಸಿದ್ದಾರೆ ಅಂತವರ ಸ್ಮರಣೆ ಶ್ರೀಮಠದಲ್ಲಿ ಮಾಡುತ್ತಿದೆ ಎಂದರು.
ಸಿಂದಗಿ ಶಾಸಕ ಅಶೋಕ ಮನಗೂಳೀ ಅವರ ಧರ್ಮಪತ್ನಿ ನಾಗರತ್ನ ಮನಗೂಳಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಹಿಮಾಲಯನ್ ಯೋಗಗುರು ನಿರಂಜನ ಶ್ರೀಗಳು,ಯಂಕಂಚಿಯ ರುದ್ರಮುನಿ ಸ್ವಾಮೀಜಿ, ವಿವಿಧ ಮಠಾದೀಶರು ವೇದಿಕೆಯಲ್ಲಿದ್ದರು.
ಕಾದಂಬರಿಕಾರ ಸಿದ್ಧರಾಮ ಉಪ್ಪಿನ ಮಾತನಾಡಿ ‘ದೀಪ ಹಚ್ಚುವ ಸಮಯ ಆಲಮೇಲ ಪರಿಸರದ ಕತೆಯೇ ಆಗಿದೆ, ಇದನ್ನು 11ದಿನಗಳಲ್ಲಿ ಬರೆದೆ, ಆದಷ್ಟೂ ನೈಜ ಹೆಸರುಗಳನ್ನು ಇಲ್ಲಿ ನಿರೂಪಿಸಿದ್ದೇನೆ ಎಂದರು,
ಬೆರಗು ಪ್ರಕಾಶನದ ಸಂಚಾಲಕ ಪ್ರಕಾಶಕ ಡಾ.ರಮೇಶ ಕತ್ತಿ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಶಿವಶರಣ ಗುಂದಗಿ, ಗೌರವ ಕೋಶಾಧ್ಯಕ್ಷ ರಮೇಶ ಭಂಟನೂರ, ಅಶೋಕ ಕೊಳಾರಿ ಮೊದಲಾದವರಿದ್ದರು.
ಶ್ರೀಶೈಲ ಮಠಪತಿ ಕಾರ್ಯಕ್ರಮ ನಿರೂಪಿಸಿದರು.