ಅರುಣೋದಯ ಶಾಲೆ: ಯೋಗ ಪ್ರಾತ್ಯಕ್ಷಿಕೆ
ಬೀದರ್: ಜೂ.23:ಇಲ್ಲಿಯ ಅರುಣೋದಯ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರು ಯೋಗದ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಯೋಗ ಶಿಕ್ಷಕರಾದ ಯೋಗೇಂದ್ರ ಯದಲಾಪುರೆ ಹಾಗೂ ರಾಜು ಅವರು ಮಕ್ಕಳಿಗೆ ಯೋಗದ ಪ್ರಕಾರಗಳನ್ನು ಹೇಳಿಕೊಟ್ಟರು.
ಶಾಲೆಯ ಆಡಳಿತಾಧಿಕಾರಿ ಸಂತೋಷಕುಮಾರ ಮಂಗಳೂರೆ, ಶಿಕ್ಷಕರಾದ ನೀಲಮ್ಮ ಗಜಲೆ, ಅಲ್ಕಾವತಿ, ಜ್ಯೋತಿ, ಮಾರುತೆಪ್ಪ, ಸುಮೀತ್ ಮತ್ತಿತರರು ಇದ್ದರು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.