ಗಾದಗಿ ಗ್ರಾಮದಲ್ಲಿ ಅದ್ದೂರಿಯಾಗಿ ಕಾರು ಹುಣ್ಣಿಮೆ ಆಚರಣೆ
ಬೀದರ ಜೂ.23: ಬೀದರ ತಾಲೂಕಿನ ಗಾದಗಿ ಗ್ರಾಮದಲ್ಲಿ ಅದ್ದೂರಿಯಿಂದ ಕಾರು ಹುಣ್ಣಿಮೆ ಆಚರಿಸಲಾಯಿತು. ರೈತ ದೇಶದ ಆಧಾರ ಸ್ತಂಭ.ಕಾರ್ಯದ ಪ್ರಮುಖವಾದ, ರೈತನ ಎರಡು ಕಣ್ಣುಗಳಂತಿ ರುವ, ಆತ ಬೆಳೆಯುವ ಪ್ರತಿ ಕಾಳಿನಲ್ಲಿ ತನ್ನದೆ ಆದ ಅದ್ವೀತಿಯ ಶ್ರಮವನ್ನು ಹೊಂದಿರುವ ಎತ್ತುಗಳನ್ನು ಪೂಜಿಸಿ, ಕೃಷಿ ಚಟುವಟಿ ಕೆಗಳನ್ನು ಪ್ರಾರಂಭಿಸುವ, ಎತ್ತುಗಳ ಕೃಷಿಯನ್ನು ಗೌರವಿಸುವ ಪ್ರತೀಕದ ರೈತನ ಪ್ರಮುಖವೇ ಕಾರ ಹುಣ್ಣಿಮೆಯಾಗಿದೆ ಎಂದು ್ಲ ರೈತರಾದ ನಾಗಣ್ಣ ಭಾಲ್ಕಿ ಗಾದಗಿ ಯವರು ಹೇಳಿದರು.
ಈ ಸಂದರ್ಭದಲ್ಲಿ ದೂಳಯ್ಯಾವಾಮಿ, ಗುರುಯ್ಯಾ ಸ್ವಾಮಿ, ಶರಣಪ್ಪ ಹಡಪದ , ಶಿವಕುಮಾರ ಸದಲಾಪೂರೆ, ವಿಠ್ಠಲರೆಡ್ಡಿ, ಚಿನ್ನ ರೆಡ್ಡಿ, ಶಾಂತಕುಮಾರ ತೇಲಿ, ಸಿದ್ದಯ್ಯಾ ಸ್ವಾಮಿ ಗಾದಗಿ , ಸಿದ್ದು ಕುಂಚಗೆ, ಶಾಂತಕುಮಾರ, ಚಂದುಸ್ವಾಮಿ ಗಾದಗಿ, ರಾಜಕುಮಾರ ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.