ಸ್ವಾಮಿ ನರೇಂದ್ರ ಕಾಲೇಜಿನಲ್ಲಿ ಯೋಗ ದಿನಾಚರಣೆ
ಬೀದರ್:ಜೂ.23: ಶ್ರೀ ಶಾಂತಿಕಿರಣ ಚಾರಿಟಬಲ್ ಆಯಿಂಡ್ ಎಜುಕೇಷನಲ್ ಟ್ರಸ್ಟ್ ಸಂಚಾಲಿತ ನಗರದ ಶ್ರೀ ಸ್ವಾಮಿ ನರೇಂದ್ರ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.
ಯೋಗ ತರಬೇತುದಾರ ಶಿವಕುಮಾರ ರೆಡ್ಡಿ ಅವರು ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಉತ್ತಮ ಆರೋಗ್ಯಕ್ಕೆ ಯೋಗ ಅವಶ್ಯಕವಾಗಿದೆ ಎಂದು ಸಲಹೆ ಮಾಡಿದರು.
ಟ್ರಸ್ಟ್ ನಿರ್ದೇಶಕಿ ಕಲ್ಪನಾ ಪಿ. ಮಠಪತಿ, ಪ್ರಾಚಾರ್ಯೆ ಮಂಗಲಾ ಎಂ, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.