ಹಸಿವು ಹಾಗೂ ಭಯ ಮುಕ್ತ  ಭಾರತ     ನಿಮಾ೯ಣ ಕ್ಕೆ ಪಣ ತೊಡೋಣ!
ಸಂಜೆವಾಣಿ ವಾರ್ತೆ
ಕುಕನೂರು, ಜೂ.23 : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ ಡಿಪಿಐ )ಪಕ್ಷದ 16ನೇ ಸಂಸ್ಥಾಪನಾ ದಿನಾಚರಣೆ ಇಂದು ಕುಕನೂರಿನಲ್ಲಿ ನಡೆಯಿತು. ಯಲಬುರ್ಗಾ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಧ್ವಜಾರೋಹಣ ಮತ್ತು ಸಭಾ ಕಾರ್ಯಕ್ರಮ ಜರಗಿತು.
ಪಕ್ಷದ ತಾಲೂಕ ಅಧ್ಯಕ್ಷರು ಅಫ್ತಾಬ್ ಪಟೇಲ್ ಧ್ವಜಾರೋಹಣ  ನೆರವೇರಿಸಿ ನಂತರ  ನಡೆದ ಸಭಾ ಕಾರ್ಯಕ್ರಮದಲ್ಲಿ ಸಂದೇಶ ಭಾಷಣ ಮಾಡಿ ಮಾತಾಡುತ್ತಾ ಪಕ್ಷವು  ಕಳೆದ 15 ವರ್ಷದಲ್ಲಿ ನಡೆಸಿದ ಹೋರಾಟ ರಾಜಕೀಯದ ಬಗ್ಗೆ ವಿವರಿಸಿ ಪಕ್ಷವನ್ನು ತಳಮಟ್ಟದಲ್ಲಿ ಇನ್ನಷ್ಟು ಬಲಿಷ್ಠಗೊಳಿಸಿ ಹಸಿವು ಮುಕ್ತ ಮತ್ತು ಭಯ ಮುಕ್ತ ಭಾರತವನ್ನು ನಿರ್ಮಿಸುವಲ್ಲಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನು  ಕಟಿಬದ್ಧರಾಗಬೇಕೆಂದು ಕರೆ ನೀಡಿದರು .
ಸಭಾ ಕಾರ್ಯಕ್ರಮವು ಯಲಬುರ್ಗಾ ಕ್ಷೆತ್ರ ಸಮಿತಿಯ ಅಧ್ಯಕ್ಷ ಅಫ್ತಾಬ್ ಪಟೇಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು .ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೂಸುಫ್ ಮೋದಿ, ತಾಲೂಕ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಹುರ್ಕಡ್ಲಿ, ಸದಸ್ಯರಾದ ಅಫ್ತಾಬ್ ಕೊಪ್ಪಳ, ತಾಜುದ್ದೀನ್ ಕುಲ್ಮಿ, ಜಂದುಸಾಬ್ ನದಾಫ್, ಅಕ್ಬರ್ ಖಾನ್ ಮುಲ್ಲಾ, ಮುಜೀಬ್, ಜಾಫರ್, ತೌಸೀಫ್, ರಿಜ್ವಾನ್, ಉಪಸ್ಥಿತರಿದ್ದರು.
ತಾಲೂಕ ಪ್ರಧಾನ ಕಾರ್ಯದರ್ಶಿ ಸೂಫಿಯಾನ್ ಯಲಬುರ್ಗಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.