ಭಾರತಸೇವಾ ದಳ ವಿಜಯನಗರ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳು
ಸಂಜೆವಾಣಿ ವಾರ್ತೆ
ಹೊಸಪೇಟೆ, ಜೂ.23: ಭಾರತಸೇವಾದಾಳವಿಜಯನಗರ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ಅಡಾಕ್‌ಸಮಿತಿ ಇತ್ತೀಚೆಗೆ ಅಸ್ತಿಕ್ಕೆ ಬಂದಿದೆ.
ನಗರದ ಕೊಟ್ಟೂರು ಸ್ವಾಮಿ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತಸೇವಾದಳ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಎನ್‌. ಸೂರ್ಯನಾರಾಯಣ ರೆಡ್ಡಿ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಯಿತು. ವಿಜಯನಗರ ಜಿಲ್ಲೆಗೆ ಅಧ್ಯಕ್ಷರಾಗಿ ಸಾಲಿ ಸಿದ್ದಯ್ಯಸ್ವಾಮಿ, ಉಪಾಧ್ಯಕ್ಷರಾಗಿ ಬ್ಯಾಳಿವಿಜಯ ಕುಮಾರ ಗೌಡ, ಕಾರ್ಯದರ್ಶಿಯಾಗಿ ಐಗೋಳ ಚಿದಾನಂದ, ಕೋಶಾಧ್ಯಕ್ಷರಾಗಿ ಪತ್ರಿ ಹಿರೇಮಠ, ರಾಜ್ಯ ಸದಸ್ಯರಾದ ಚನ್ನವೀರಸ್ವಾಮಿ ಪದಾಧಿಕಾರಿಗಳಾಗಿ ಆಯ್ಕೆಯಾದರು. ಈ ಸಭೆಯಲ್ಲಿ ಎಲ್ಲಾ ತಾಲೂಕಿನ ಸದಸ್ಯರು ಭಾಗವಹಿಸಿದ್ದರು.