ಪರಿಸರ ಸಂರಕ್ಷಣೆಗೆ ಮರ-ಗಿಡಗಳು ಬೆಳೆಸಿ :ಡಾ. ಚನ್ನವೀರ ಶಿವಾಚಾರ್ಯರು
ಚಿಂಚೋಳಿ :ಜೂ.23:ಪರಿಸರ ಅಸಮತೋಲನ ಹೋಗಲಾಡಿಸಲು ಕಡ್ಡಾಯವಾಗಿ ಮರ-ಗಿಡಗಳನ್ನು ಬೆಳೆಸಿ ಸಂರಕ್ಷಿಸಬೇಕೆಂದು ಹಾರಕೂಡ ಶ್ರೀಮಠದ ಡಾ. ಚನ್ನವೀರ ಶಿವಾಚಾರ್ಯರು ಹಾರಕೂಡ ಶ್ರೀಮಠದಲ್ಲಿ ಪರಿಸರ ವಾಹಿನಿ ಬೀದರ್ ಹಮ್ಮಿಕೊಂಡಿರುವ ಕಾರ ಹುಣ್ಣಿಮೆ ಶುಭ ಸಂದರ್ಭದಲ್ಲಿ ರೈತರಿಗೆ ಸಸಿ ವಿತರಣೆ ಹಾಗೂ ಪರಿಸರ ಸಂರಕ್ಷಣೆ ಜನ ಜಾಗೃತಿ ಕಾರ್ಯಕ್ರಮ ಸಸಿ ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪರಿಸರ ಅಸಮಾತೊಲನೆ ಯಿಂದ ಬರಗಾಲ ಸೇರಿದಂತೆ ಅನೇಕ ಪ್ರಾಕೃತಿಕ ವಿಕೋಪಗಳು ಸಂಭವಿಸಲಾರಂಭಿಸಿವೆ. ಪರಿಸರ ಸಂರಕ್ಷಣೆ ಮಾಡಿದರೆ ಮಾತ್ರ ನಮಗೆ ಉಳಿಗಾಲವಿದೆ ಚಿಂಚೋಳಿ ತಾಲ್ಲೂಕು ಬಿಸಿಲಿನ ತಾಲೂಕವಾಗಿದ್ದು ಶೇಕಡವಾರು ನೋಡಿದಾಗ ಅತಿ ಕಡಿಮೆ ಪ್ರಮಾಣದ ಅರಣ್ಯ ಪ್ರದೇಶ ಹೊಂದಿರುವ ತಾಲೂಕ ಆಗಿದೆ. ಹಸಿರು ಹೊದಿಕೆ ಹೆಚ್ಚಿಸಲು ನಮ್ಮೆಲ್ಲನಾಗರಿಕರ ಅದ್ಯ ಕರ್ತವ್ಯವಾಗಿದೆ. ಪವಿತ್ರವಾದ ಬಿಲ್ವಪತ್ರವೃಕ್ಷವು ಪ್ರತಿಯೊಂದು ಔಷಧಿಯಲ್ಲಿ ಬಳಕೆಯಾಗುತ್ತಿದೆ ಬಿಲ್ವಾ ಪತ್ರೆ ಮರ ಉಳಿಸಿ ಸಂರಕ್ಷಿ ಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ಪರಿಸರವಾದಿ ಶೈಲೇಂದ್ರ ಕವಡಿ ಮಾತನಾಡಿ ಹಲವಾರು ಗ್ರಾಮಗಳು ತಾಲೂಕಿನ ಚಿಂಚೋಳಿ ಪರಿಸರ ಸಂರಕ್ಷಣೆಗೆ ದತ್ತು ತೆಗೆದುಕೊಂಡು ರೈತರಲ್ಲಿ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮಾಡಲಾಗುತ್ತದೆ ಎಂದರು. ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಂತೆ ತುಳಸಿ ಸಸ್ಯ ಪ್ರತಿಯೊಬ್ಬರು ಕಡ್ಡಾಯವಾಗಿ ಮನೆ ಅಂಗಳದಲ್ಲಿ ಬೆಳೆಸಲು ಮನವಿ ಮಾಡಿದರು ಪರಿಸರ ಜಾಗೃತಿ ಕಾರ್ಯಕ್ರಮವನ್ನು ಪೂಜ್ಯರು ಚಾಲನೆ ನೀಡಿ ಸಸಿ ವಿತರಿಸಿ ಆಶೀರ್ವದಿಸಿ ಹಾರೈಸಿದಕ್ಕೆ ಸಂತೋಷವಾಗಿದೆ ಎಂದರು. ಯುವ ಮುಖಂಡ ವೀರಶೆಟ್ಟಿ ಹಳ್ಳಿ ಐನಾಪುರ ಪ್ರಾಸ್ತವಿಕವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಶಿಕ್ಷಕರಾದ ಬಸವರಾಜ ಏನೋಳ್ಳಿ, ಕೆಎ???ರ್ಟಿಸಿ ಡಿಪೆÇೀ ಮ್ಯಾನೇಜರ್ ಅಶೋಕ್ ಪಾಟೀಲ್, ಹಿರಿಯರಾದ ಶಿವಕುಮಾರ್ ದೇಶಮುಖ್ ಅಪ್ಪಣ್ಣ ಹಾರ್ಕೋಡ್ ಕಾರ್ತಿಕ್ ಸ್ವಾಮಿ ಹಾಗೂ ಶ್ರೀ ಮಠದ ನೂರಾರು ಭಕ್ತರು ಉಪಸ್ಥಿತರಿದ್ದರು ಚಿಂಚೋಳಿ ವಲಯ ಅರಣ್ಯ ಇಲಾಖೆಯ ವತಿಯಿಂದ ಪ್ರತಿಯೊಬ್ಬ ರೈತರಿಗೆ ಸಸ್ಯಗಳನ್ನು ಪೂಜ್ಯರ ಅಮೃತ ಹಸ್ಥದಿಂದ ವಿತರಿಸಲಾಯಿತು