ಸ್ವಾಧೀನ ಕಳೆದುಕೊಂಡ ಕಾಲುಗಳಿಗೆ ಮರುಜೀವ ನೀಡಿದ ಜೆಎಸ್‍ಎಸ್ ಆಸ್ಪತ್ರೆ: ಡಾ.ಶರಣ ಮಳಖೇಡ್ಕರ್
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.23:ಜೆಎಸ್‍ಎಸ್ ಆಸ್ಪತ್ತೆಯ ಎಲುಬು ಮತ್ತು ಕೀಲುಗಳ ವಿಭಾಗದ ತಜ್ಞ ವೈದ್ಯರ ಬಳಗ ಸ್ವಾಧೀನ ಕಳೆದುಕೊಂಡಿದ್ದ ವ್ಯಕ್ರಿಯೋರ್ವನ ಕಾಲುಗಳಿಗೆ ಮರುಜೀವ ನೀಡುವಲ್ಲಿ ಯಶಸ್ವಿಯಾಗಿದೆ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಶರಣ ಮಳಖೇಡ್ಕರ್ ಹೇಳಿದರು.
ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆದ ಯಶಸ್ವಿ ಶಸ್ತ್ರಚಿಕಿತ್ಸೆಯ ಕುರಿತು ಮಾಹಿತಿ ನೀಡಿದ್ದಾರೆ.
ಬಸವರಾಜ್ ರಾಂಪೂರ ಎನ್ನುವ ವ್ಯಕ್ತಿ ಯಾವುದೋ ಕಾರಣದಿಂದ ಬಿದ್ದು ಕಾಲಿನ ಸ್ವಾಧೀನತೆಯನ್ನು ಕಳೆದುಕೊಂಡಿದ್ದರು. ನಗರದ ವಿವಿಧ ವೈದ್ಯರುಗಳನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಂಡರೂ ಸಹ ಯಾವುದೇ ರೀತಿಯ ಪ್ರಯೋಜನ ಕಾಣದೇ ಕಳೆದ ಒಂದು ತಿಂಗಳಿನಿಂದ ಹಾಸಿಗೆ ಹಿಡಿದು ಮಲಗಿದ್ದರು. ಅದರಲ್ಲೂ ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿಗೆ ಪಿಟ್ಸ್ ರೋಗದ ಸಮಸ್ಯೆ ಇದ್ದು ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಅದು ಮರುಕಳಿಸುವ ಸಾಧ್ಯತೆ ಇರುವ ಕಾರಣ ನಾವು ಯಾವುದೇ ರೀತಿಯ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ತಿರಸ್ಕರಿಸಿದ್ದರು. ಹಾಸಿಗೆಯನ್ನು ಬಿಟ್ಟು ಏಳಲಾಗದ ಸ್ಥಿತಿಯಲ್ಲಿ ಜೀವನ ಕಳೆಯಬೇಕಾಯಿತಲ್ಲ ಎಂದು ಕಂಗಾಲಾದ ಕುಟುಂಬ ನಮ್ಮ ಆಸ್ಪತ್ರೆಗೆ ಆಗಮಿಸಿ ಎಲುಬು ಮತ್ತು ಕೀಲುಗಳ ವಿಭಾಗದ ಮುಖ್ಯ ವೈದ್ಯರನ್ನು ಸಂಪರ್ಕಿಸಿದಾಗ ಅಲ್ಲಿನ ತಜ್ಞ ವೈದ್ಯರುಗಳು ಈ ಹಿಂದೆ ನೀಡಲಾಗಿದ್ದ ಎಲ್ಲ ವರದಿಗಳನ್ನು ಅಧ್ಯಯನ ಮಾಡಿ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಚಿಕಿತ್ಸೆ ನೀಡಲು ಮುಂದಾದರು. ಅದರ ಪರಿಣಾಮವಾಗಿ ಇಂದು ಶಸ್ತ್ರಚಿಕಿತ್ಸೆಯ ನಂತರದಲ್ಲಿ ವ್ಯಕ್ತಿಯು ಪುನಃ ನಡೆದಾಡುವ ಸಾಮಥ್ರ್ಯವನ್ನು ಪಡೆದುಕೊಂಡಿದ್ದು ಕುಟುಂಬ ವರ್ಗದವರಲ್ಲಿ ಸಂಸತ ಮೂಡಿದೆ. ಇದಕ್ಕೆ ನಮ್ಮ ತಜ್ಞ ವೈದ್ಯರ ತಂಡದ ಕಾರ್ಯ ಎಷ್ಟು ಮುಖ್ಯವಾಗಿದೆಯೋ ಅಷ್ಟೇ ಸಿದ್ಧೇಶ್ವರ ಶ್ರೀಗಳ ಆಶಿರ್ವಾದವು ನಮ್ಮ ಜೊತೆಗಿದೆ. ಹೀಗಾಗಿ ಎಂಥದೇ ಸಮಸ್ಯೆಯನ್ನು ಸಹ ನಿರಾತಂಕವಾಗಿ ನಾವು ನಿಭಾಯಿಸುತ್ತೇವೆ ಎಂದು ತಿಳಿಸಿದ್ದಾರೆ.
ಶಸ್ತ್ರ ಚಿಕಿತ್ಸೆಯನ್ನು ನಿರ್ವಹಿಸಿದ ಎಲುಬು ಮತ್ತು ಕೀಲುಗಳ ವಿಭಾಗದ ಸರ್ವ ವೈದ್ಯ ಬಳಗಕ್ಕೂ ಹಾಗೂ ಶಸ್ತ್ರಚಿಕಿತ್ಸೆಗೆ ನೆರವಾದ ಎಲ್ಲ ಓಟಿ ವಿಭಾಗದ ಮುಖ್ಯಸ್ಥರು, ಅರವಳಿಕೆ ತಜ್ಞರು ಹಾಗೂ ಸರ್ವ ಸಿಬ್ಬಂದಿಗಳಿಗೂ ಶ್ರೀ ಸಿದ್ಧೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷÀ ಬಸನಗೌಡ ಪಾಟೀಲ ಯತ್ನಾಳ ಹಾಗೂ ಸರ್ವ ಸದಸ್ಯ ಬಳಗದವರು ಶುಭ ಹಾರೈಸಿದ್ದಾರೆ.