ಕಾವೇರಿ ಶಾಶ್ವತ ಪರಿಹಾರಕ್ಕೆ ಸಹಿ ಸಂಗ್ರಹ ಚಳವಳಿ
ಸಂಜೆವಾಣಿ ನ್ಯೂಸ್
ಮೈಸೂರು:ಜೂ.23:- ಕಾವೇರಿ ಸಮಸ್ಯೆ ಇತ್ಯರ್ಥಕ್ಕೆ ಒತ್ತಾಯಿಸಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡುವ ಪ್ರಯತ್ನ ಕಾವೇರಿ ಕ್ರಿಯಾ ಸಮಿತಿ ಮಾಡಲಿದೆ ಎಂದು ಕಾವೇರಿ ಕ್ರಿಯಾಸಮಿತಿ ಅಧ್ಯಕ್ಷ ಎಸ್.ಜಯಪ್ರಕಾಶ್ ವಿಶ್ವಾಸ ವ್ಯಕ್ತಪಡಿಸಿದರು.
ಕಾವೇರಿ ಕ್ರಿಯಾ ಸಮಿತಿಯಿಂದ ಕಾವೇರಿ ಶಾಶ್ವತ ಪರಿಹರ ಹಾಗೂ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಸಹಿ ಸಂಗ್ರಹ ಚಳವಳಿ ನೇತೃತ್ವವಹಿಸಿ ಅವರು ಮಾತನಾಡಿದರು. ನೂತನ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿ ಕಾವೇರಿ ಸಮಸ್ಯೆ ಇತ್ಯರ್ಥ ಪಡಿಸುವಂತೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಇನ್ನೂ ಮೇಕೆದಾಟು ಯೋಜನೆ ಜಾರಿಯ ಬಗ್ಗೆ ಡಿ.ಕೆ.ಶಿವಕುಮಾರ್ ಅವರಿಗೆ ಚುನಾವಣಾ ಮುನ್ನ ಇದ್ದ ಕಾಳಜಿ ಉಪಮುಖ್ಯಮಂತ್ರಿ ಆದ ಬಳಿಕ ಇಲ್ಲವಾಗಿದೆ. ಅವರು ಮೇಕೆದಾಟು ವಿಚಾರವಾಗಿ ಜನತೆಗೆ ಸ್ಪಷ್ಟ ಪಡಿಸಬೇಕು. ಕೇಂದ್ರಕ್ಕೆ ಯೋಜನಾ ವರದಿ ನೀಡಿರುವ ಕುರಿತು ತಿಳಿಸಿಕೊಡಬೇಕು. ಕೇಂದ್ರದ ಮೇಲೆ ಸುಮ್ಮನೆ ಆರೋಪ ಹೊರಿಸುವುದು ನಿಲ್ಲಿಸಿ ವಾಸ್ತವ ಮಾತನಾಡಬೇಕೆಂದು ಒತ್ತಾಯಿಸಿದರು.
ಕಾವೇರಿ ನೀರಿನ ಸಮಸ್ಯೆ ಸೇರಿ ರೈತರ ಯಾವುದೇ ಸಮಸ್ಯೆಗಳನ್ನು ಬಗೆಹರಿಸದೆ ರಾಜ್ಯ ಸರ್ಕಾರ ಕಾಲಹರಣ ಮಾಡುತ್ತಿದೆ. ಕಾವೇರಿ ನೀರಿನ ಶಾಶ್ವತ ಪರಿಹಾರಕ್ಕೆ ಹಾಗೂ ಮೇಕೆದಾಟು ಯೋಜನೆ ಪ್ರಾರಂಭಿಸಲು ನಮ್ಮ ಆಗ್ರಹ ನಿರಂತರವಾಗಿ ಇರಲಿದೆ. ಒಂದೆರಡು ವಾರದಲ್ಲಿ ನಮ್ಮ ಸಹಿ ಸಂಗ್ರಹ ಪೂರ್ಣವಾಗಲಿದ್ದು, ರಾಷ್ಟ್ರಪತಿಗಳಿಗೂ ಮನವಿ ಮಾಡಲು ಕಾರ್ಯಕ್ರಮ ರೂಪಿಸುವುದಾಗಿ ಹೇಳಿದರು.
ಕಾವೇರಿ ಕ್ರಿಯಾ ಸಮಿತಿಯ ಮೂಗೂರು ನಂಜುಂಡಸ್ವಾಮಿ, ತೇಜಸ್ ಲೋಕೇಶ್ ಗೌಡ, ಅಶೋಕ್ (ಸುಬ್ಬಣ್ಣ,) ಸಿಂದೂವಳ್ಳಿ ಶಿವಕುಮಾರ್, ರವೀಶ್, ರಾಜಶೇಖರ್, ಬಿ.ಬಿ.ಹನುಮಂತಪ್ಪ, ಪ್ರಭಾಕರ್, ಪದ್ದಿನಿ, ವಾಣಿ, ಬಾಲಕೃಷ್ಣ, ಡಾ.ರಾಜ್ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಪುರುಷೋತ್ತಮ, ಆಟೋ ಮಹದೇವ್, ಕೃಷ್ಣಯ್ಯ, ಚಂದ್ರಶೇಖರ್, ಪ್ರಭುಬಸಪ್ಪ, ರಾಜಣ್ಣ, ಲಕ್ಷ್ಮೀ, ರಾಮಚಂದ್ರ, ಭಾಗ್ಯಮ್ಮ, ಮಂಜುಳ, ಹನುಮಂತೇಗೌಡ, ನಾಗರಾಜೇಗೌಡ, ಮಹೇಶ್ ಗೌಡ, ನೇಹಾ, ಆಶೋಕ್, ಮಂಜುಳ ವಿಷ್ಣು ಕುಮಾರಸ್ವಾಮಿ ಸಂಜಯ್, ವರಕೂಡು ಕೃಷ್ಣಗೌಡರು ಸೇರಿ ಅನೇಕ ಹೋರಾಟಗಾರರು ಭಾಗವಹಿಸಿದ್ದರು.