ಸಂಭ್ರಮದಿಂದ ಜರುಗಿದ ಹಜ್ರತ್ ಖೋಂದಮೀರುದ್ದೀನ್ ಜುನೆದಿ ಜಾತ್ರೆ
ಜೇವರ್ಗಿ:ಜೂ.23:ಶ್ರೀ ಹಜ್ರತ್ ಖೋಂದಮೀರುದ್ದೀನ್ ಜುನೆದಿ ದರ್ಗಾದ ಜಾತ್ರೆ ಸಂಭ್ರಮದಿಂದ ಸರ್ವಧರ್ಮದವರು ಸೆರಿಕೊಂಡು ಆಚರಿಸುವುದರ ಮುಲಕ ಎಲ್ಲಾ ಧರ್ಮದವರು ಒಂದೆ ಎಂಬ ಸಂದೆಶದಡಿಯಲ್ಲಿ ಜಾತ್ರೆಯನ್ನ ಆಚರಿಸಿದರು.
ಪಟ್ಟಣದ ಬುಗ್ಗಿ ಬಡಾವಣೆಯಲ್ಲಿನ ಶ್ರೀ ಹಜ್ರತ್ ಖೋಂದಮೀರುದ್ದೀನ್ ಜುನೆದಿ ದರ್ಗಾದ ಜಾತ್ರೆಯು ಶುಕ್ರವಾರ ಹಾಗೂ ಶನಿವಾರ ಎರಡು ದಿನಗಳ ಕಾಲ ಆಚರಿಸಿದರು.
ಪ್ರತಿವರ್ಷದಂತೆ ಬಕ್ರೀದ ಹಬ್ಬ ಮುಗಿದ 5 ದಿನಗಳ ಶ್ರೀ ಹಜ್ರತ್ ಖೋಂದಮೀರುದ್ದೀನ್ ಜುನೆದಿ ದರ್ಗಾದ ಜಾತ್ರೆಯು ಆಚರಿಸಲಾಗುತ್ತದೆ. ಅದರಂತೆ ವರ್ಷವು ಕೂಡ ಸಂಭ್ರಮದಿಂದ ಶ್ರೀ ಹಜ್ರತ್ ಖೋಂದಮೀರುದ್ದೀನ್ ಜುನೆದಿ ದರ್ಗಾದ ಜಾತ್ರೆಯು ಆಚರಿಸಲಾಯಿತು. ಪಟ್ಟಣದ ವಿವಿಧ ಬಡಾವಣೆಗಳಿಂದ ಶುಕ್ರವಾರ ಹಾಗೂ ಶನಿವಾರ ಗಂಧ (ಸಂದಲ್) ಮೆರವಣಿಗೆ ನಡೆಸಲಾಯಿತು. ಈ ಜಾತ್ರೆಯಲ್ಲಿ ಜಾತಿ, ಧರ್ಮದ ಭೇಧ ಭಾವವಿಲ್ಲದೆ ಎಲ್ಲರು ಸೇರಿ ದರ್ಗಾ ಜಾತ್ರೆಯನ್ನ ಆಚರಿಸುತ್ತಾರೆ. 48 ಗಂಟೆಗಳ ಕಾಲ ಪ್ರಸಾಧ ಸೇವೆಯನ್ನು ನಡೆಸಲಾಗುತ್ತದೆ. 28 ರಿಂದ 30 ಕ್ವೀಂಟಾಲ್ ಅನ್ನವನ್ನು ಮಾಡಲಾಗಿದೆ.
ಹಿಂದು ಮುಸ್ಲಿಂ ಇಬ್ಬರು ಕೂಡ ಕಮೀಟಿಯ ನೇತೃತ್ವದಲ್ಲಿ ಯಾವುದೆ ತೊಂದರೆಯಾಗದಂತೆ ದರ್ಗಾ ಜಾತ್ರೆಯನ್ನ ಆಚರಿಸುತ್ತಾರೆ. ಎರಡು ದಿನಗಳ ಕಾಲ ಹಗಲು ರಾತ್ರಿ ಭಕ್ತರು ಆಗಮಿಸಿ ದರ್ಶನವನ್ನು ಪಡೆಯುತ್ತಾರೆ. ಅನೇಕರು ತಮ್ಮ ಹರಕೆಯನ್ನ ತಿರಿಸಲು ಆಗಮಿಸುತ್ತಾರೆ. ಪ್ರತಿ ವರ್ಷಕಿಂತಲು ಈ ವರ್ಷ ಹೆಚ್ಚಿನ ಭಕ್ತರು ಆಗಮಿಸಿದರು.
ಈ ಸಂಧರ್ಭದಲ್ಲಿ ಕಮೀಟಿಯ ಸರ್ವ ಸದಸ್ಯರು, ಭಕ್ತರು, ತಾಲೂಕಿನ ಮುಖಂಡರು ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.