ಉಡುಗೊರೆ ಜಲಾಶಯ ಕಾಲುವೆಗಳ ಅಭಿವೃದ್ಧಿಗೆ ಕ್ರಮ: ಶಾಸಕ ಮಂಜುನಾಥ್
ಸಂಜೆವಾಣಿ ವಾರ್ತೆ
ಹನೂರು ಜೂ 22 :- ಉಡುತೊರೆ ಜಲಾಶಯಕ್ಕೆ ಶಾಸಕ ಎಂಆರ್ ಮಂಜುನಾಥ್ ಭೇಟಿ ನೀಡಿ. ಜಲಾಶಯ ಅಭಿವೃದ್ಧಿ ಕಾಲುವೆಗಳ ಅಭಿವೃದ್ಧಿಯ ಬಗ್ಗೆ ಮಾಹಿತಿ ಪಡೆದರು. ಕಾಲುವೆಯಲ್ಲಿ ಗಿಡ ಗೆಡ್ಡೆಗಳು ಬೆಳೆದು ದುರಸ್ತಿಯಾಗಿವುದನ್ನು ಗಮನಿಸಿ ಅಭಿವೃದ್ಧಿ ಪಡಿಸಬೇಕೆಂದು ಇಂಜಿನಿಯರ್ ಅವರಿಗೆ ತಾಕಿತು ಮಾಡಿದರು.
ತಾಲೂಕಿನ ಅಜ್ಜಿಪುರ ಸಮೀಪದ ಉಟುತೊರೆ ಜಲಾಶಯಕ್ಕೆ ಭೇಟಿ ನೀಡಿದ ಶಾಸಕರು ಜಲಾಶಯದ ಅಭಿವೃದ್ಧಿ ಕಾಲುವೆಗಳ ಬಗ್ಗೆ ಮಾಹಿತಿ ಪಡೆದು ಪರಿಶೀಲಿಸಿದರು.
ಈ ಬಗ್ಗೆ ಮಾತನಾಡಿದ ಶಾಸಕ ಮಂಜುನಾಥ್ ಅವರು ಕ್ಷೇತ್ರ ದಾದ್ಯಂತ ಬರುವ ಕಾಲುವೆಗಳನ್ನು ನರೇಗಾ ಯೋಜನೆಯಡಿಯಲ್ಲಿ ಸಂಪೂರ್ಣವಾಗಿ ಸ್ವಚ್ಛತೆ ಮಾಡಬೇಕು. ಇದರಿಂದ ಕೂಲಿ ಕಾರ್ಮಿಕರಿಗೂ ಕೆಲಸ ನೀಡಿದಂತಾಗುತ್ತದೆ ಎಂದು ಸಂಬಂದ ಪಟ್ಟ ಕಬಿನಿ ಇಲಾಖೆ ಇಂಜಿನಿಯರ್ ಅವರಿಗೆ ಸೂಚಿಸಿದರು.
ಅಜ್ಜೀಪುರ ಭಾಗದಲ್ಲಿ ನೀರಿನ ಒಳ ಹರಿವು ಹೆಚ್ಚಾಗಿ ಹರಿವುವ ಸಂದರ್ಭದಲ್ಲಿ ರಸ್ತೆ ಮೇಲೆ ನೀರು ಹರಿಯುವುದರಿಂದ ಸಾರ್ವಜನಿಕರಿಗೆ ಹೋದದಲೂ ತೊಂದರೆ ಆಗುವುದರಿಂದ ರಸ್ತೆಯನ್ನು ಎತ್ತರ ಮಾಡಬೇಕು. ಕಾಂಚಳ್ಳಿ ರಸ್ತೆಗೆ ನೀರಾವರಿ ಇಲಾಖೆಗೆ ಸೇರಿದ ರಸ್ತೆಯನ್ನು ಸರಿಪಡಿಸಿ ಕಾಂಚಳ್ಳಿಯಿಂದ ಕಾಲುವೆಗಳು ದುರಸ್ತಿ ಆಗಿದ್ದು ಅದಕ್ಕೆ ತಡೆಗೋಡೆ ಪೈಪ್ ಲೈನ್ ಅಳವಡಿಸಿ ಅಭಿವೃದ್ಧಿ ಪಡಿಸಬೇಕು ಎಂದು ತಿಳಿಸಿದರು.
ಜಲಾಶಯದಲಿ ಮಳೆ ಬಂದಾಗ ಜಲಾಶಯದಲ್ಲಿ ನೀರು ಶೇಖರಣೆಯಾಗುವಂತೆ ಅಭಿವೃದ್ಧಿಪಡಿಸಬೇಕು. ಕಾಲುವೆಗಳನ್ನು ಅಭಿವೃದ್ಧಿ ಪಡಿಸಬೇಕು. ನೀರನ್ನು ಹರಿಬಿಟ್ಟಾಗ ಜಮೀನುಗಳಿಗೆ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ಇದರಿಂದ ರೈತರು ಬೆಳೆ ಬೆಳೆಯಲು ಅನುಕೂಲವಾಗಲಿದೆ ಎಂದು ಹೇಳಿದರು .
ಭೂ ಪರಿಹಾರ ನೀಡುವಂತೆ ಶಾಸಕರಿಗೆ ರೈತರು ಮನವಿಯನ್ನು ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಸಂಬಂಧಪಟ್ಟ ಕಬಿನಿ ಇಲಾಖೆ ಅಧಿಕಾರಿಗಳಿಗೆ ಪರಿಶೀಲ ನಡೆಸಿ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಈ ಕಾರ್ಯಪಾಲಕ ಇಂಜಿನಿಯರ್ ರಮೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಮಕೃಷ್ಣ ಕರುಣಾಮಯಿ, ಮುಖಂಡರುಗಳಾದ ಮಂಜೇಶ್ ಗೌಡ, ಮಹಾದೇವ್, ಚಿನ್ನವೆಂಕಟ, ಕೆ.ಗುಂಡಾಪುರ ಗುರು, ಪಾಳ್ಯ ಗೋಪಾಲ್ ನಾಯಕ, ಕುರಟ್ಟಿ ಹೊಸೂರು ನಾಗರಾಜ್, ಕೃಷ್ಣ,ರಾಮ ಸೇರಿದಂತೆ ಇನ್ನಿತರರು ಇದ್ದರು.