ರಾಜ್ಯ ಮಟ್ಟದ ಟೆನ್ನಿಕಾಯ್ಟ್ ಸ್ಪರ್ಧೆಗೆ ಆಯ್ಕೆಯಾದ ಬೆಸ್ಟ್ ಕಾಲೇಜ್ ವಿದ್ಯಾರ್ಥಿಗಳು
ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.26: ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಆಯೋಜಿಸಿದ ಎಎಸ್.ಎಂ ಪಿ.ಯು.ಕಾಲೇಜಿನಲ್ಲಿ  ಟೆನ್ನಿಕಾಯ್ಟ್ ಸ್ಪರ್ಧೆಯಲ್ಲಿ ಬೆಸ್ಟ್ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳಾದ ಚೇತನಾ ಮತ್ತು ಚೈತ್ರ ವಿಜೇತರಾಗಿ ರಾಜ್ಯ ಮಟ್ಟದ ಆಯ್ಕೆಯಾಗಿದ್ದು.
ಇವರನ್ನು ಸಂಸ್ಥೆಯ ಅಧ್ಯಕ್ಷರಾದ ಕೆ. ರಾಮಪ್ಪ, ಉಪಾದ್ಯಕ್ಷರು ಕೆ. ತಿಲಕ್ ಕುಮಾರ್, ಕಾರ್ಯದರ್ಶಿ ಎಮ್. ಶ್ರೀನಿವಾಸುಲು ಪ್ರಾಚಾರ್ಯರು ಕೆ. ವೆಂಕಟೇಶ್ವರರಾವ್, ಉಪ ಪ್ರಾಚಾರ್ಯರು ಜಿ. ಶ್ರೀನಿವಾಸರೆಡ್ಡಿ, ದೈಹಿಕ ಶಿಕ್ಷಕರಾದ ಶಿವಾನಂದ್, ತಿಪ್ಪೇರುದ್ರಪ್ಪ, ವೆಂಕಟಲಕ್ಷ್ಮಿ ಮತ್ತು ಸಿಬ್ಬಂದಿವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.