ತಂತ್ರಜ್ಞಾನದ ಕಲಿಕೆಗೆ ಉತ್ತೇಜನ

ಬೆಂಗಳೂರು, ಸೆ.೨೬- ಟ್ರಯೋ ವರ್ಲ್ಡ್ ಅಕಾಡೆಮಿ ೨೦೨೪-೨೦೨೭ ಅವಧಿಗೆ ಆಪಲ್ ಡಿಸ್ಟಿಂಗ್ವಿಶ್ಡ್ ಸ್ಕೂಲ್ ಎಂದು ಗುರಿತಿಸಲಾಗಿದ್ದು ತಂತ್ರಜ್ಞಾನದ ಮೂಲಕ ಕಲಿಕೆಗೆ ಒತ್ತು ನೀಡಿದೆ
ಶಿಕ್ಷಣದಲ್ಲಿ ನಿರಂತರ ನಾವೀನ್ಯತೆ ಮತ್ತು ಬೋಧನೆ ಮತ್ತು ಕಲಿಕೆ ಪ್ರೇರೇಪಿಸಲು ಆಪಲ್ ಉತ್ಪನ್ನಗಳನ್ನು ಬಳಸುವ ಬದ್ಧತೆಯ ಆಧಾರದ ಮೇಲೆ ಶಾಲೆ ಕಾರ್ಯನಿರ್ವಹಿಸಲಿದೆ.ಆಪಲ್ ಡಿಸ್ಟಿಂಗ್ವಿಶ್ಡ್ ಶಾಲೆಗಳು ನಾಯಕತ್ವ ಮತ್ತು ಶೈಕ್ಷಣಿಕ ಉತ್ಕೃಷ್ಟತೆಯ ಕೇಂದ್ರಗಳಾಗಿವೆ,ತಂತ್ರಜ್ಞಾನ-ಸಮೃದ್ಧ ಪರಿಸರಗಳು ಕಲಿಕೆಯ ಗುರಿ ಉತ್ತೇಜಿಸಲಿದೆ.
ಆಪಲ್ ಡಿಸ್ಟಿಂಗ್ವಿಶ್ಡ್ ಶಾಲೆಗಳಲ್ಲಿ, ಫಾರ್ವರ್ಡ್-ಥಿಂಕಿಂಗ್ ನಾಯಕರು ಮತ್ತು ಸಮುದಾಯಗಳು ಬೋಧನೆ ಮತ್ತು ಕಲಿಕೆ ಪ್ರೇರೇಪಿಸಲು, ಊಹಿಸಲು ಮತ್ತು ಪ್ರಭಾವ ಬೀರಲು ಕೆಲಸ ಮಾಡಲಿದ್ದು ಶೈಕ್ಷಣಿಕ ಸಾಧನೆಗಳ ಫಲಿತಾಂಶ ಸುದಾರಣೆಗೆ ಸಹಕಾರಿಯಾಗಲಿದೆ
ಪ್ರಪಂಚದಾದ್ಯಂತದ ಶಾಲೆಗಳು ಕಲಿಕೆ ಪರಿವರ್ತಿಸಲು ಐಪ್ಯಾಡ್ ಮತ್ತು ಮ್ಯಾಕ್ ಅನ್ನು ಬಳಸುತ್ತಿವೆ. ಶಿಕ್ಷಕರು ತಮ್ಮ ಪಾಠಗಳಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಕಲಿಯಲು ಅನುವು ಮಾಡಿಕೊಡಲಾಗಿದೆ