ದರ್ಶನ್ ಧ್ರುವನಾರಾಯಣ್‍ರಿಂದ ಆರೋಗ್ಯ ರಕ್ಷಾ ಸಮಿತಿ ಸಭೆ
ಸಂಜೆವಾಣಿ ವಾರ್ತೆ
ನಂಜನಗೂಡು: ಸೆ.26:– ನಗರದ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಕ್ಷೇತ್ರದ ಯುವ ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರು ಪಾಲ್ಗೊಂಡು, ಆಸ್ಪತ್ರೆಗೆ ಸಂಬಂಧ ಪಟ್ಟ ವಿಷಯಗಳ ಬಗ್ಗೆ ವೈದ್ಯಧಿಕಾರಿಗಳು ಮತ್ತು ಸಮಿತಿಯ ಸದಸ್ಯರೊಂದಿಗೆ ಬಗ್ಗೆ ಚರ್ಚಿಸಿದರು.
ಸಭೆಯಲ್ಲಿ ಆಯವ್ಯಯ ಲೆಕ್ಕಪತ್ರವನ್ನು ಮಂಡಿಸಿದರು ಆದಾಯ ಖರ್ಚು ವೆಚ್ಚವನ್ನು ತಿಳಿಸಿದರು ಇದನ್ನೆಲ್ಲಾ ಪರಿಶೀಲಿಸಿದ ಶಾಸಕರು ಸಮಿತಿಯ ಸದಸ್ಯರಿಗೆ ಆಯವ್ಯಯ ಪುಸ್ತಕ ನೀಡದೇ ಇರುವುದನ್ನು ತಿಳಿಸಿ ಮುಂದಿನ ಹದಿನೈದು ದಿನದಲ್ಲಿ ಮತ್ತೆ ಸಭೆ ಕರೆಯಲು ಸೂಚಿಸಿದರು ಮತ್ತು ಎಲ್ಲಾ ಸಮಿತಿ ಸದಸ್ಯರಿಗೆ ಆಯವ್ಯಯ ಪುಸ್ತಕ ಪಟ್ಟಿಯನ್ನು ನೀಡಲು ತಿಳಿಸಿದರು ಸಮಿತಿಯ ಸದಸ್ಯರಿಗೆ ಮಾಹಿತಿ ಇಲ್ಲದೆ ಇರುವುದರಿಂದ ಸಭೆ ನಡೆಸಬಾರದು ಆದ್ದರಿಂದ ಅವರಿಗೂ ಆಯವ್ಯಯ ಪಟ್ಟಿಪುಸ್ತಕ ನೀಡುವಂತ ಸೂಚಿಸಿದರು.
ಇದಲ್ಲದೆ ಆಸ್ಪತ್ರೆಗೆ ಕುಂದುಕೊರತೆ ಬಗ್ಗೆ ಶಾಸಕರ ಗಮನಕ್ಕೆ ತಂದರು ಕುಡಿಯುವ ನೀರಿನ ವಿಷಯ ರಾತ್ರಿ ಟೈಮ್ ಪೆÇೀಲಿಸು ಗಸ್ತಿನ ಬಗ್ಗೆ ಸಿಸಿ ಕ್ಯಾಮೆರಾ ಅಳವಡಿಸುವ ಬಗ್ಗೆ ಸಣ್ಣಪುಟ್ಟ ಆಸ್ಪತ್ರೆಯ ದುರಸ್ತಿ ಬಗ್ಗೆ ವೈದ್ಯರ ಕೊರತೆ ಬಗ್ಗೆ ಹಲವಾರು ಸಮಸ್ಯೆಗಳ ಬಗ್ಗೆ ತಿಳಿಸಿದರು ಇದರ ಜೊತೆಗೆ ಸಮಿತಿಯ ಸದಸ್ಯರು ಕೂಡ ಹಲವಾರು ವಿಷಯವನ್ನು ಪ್ರಸ್ತಾಪಿಸಿದರು ನೇರಳೆ ಗ್ರಾಮದಲ್ಲಿ ಆಯುರ್ವೇದಿಕ್ ಆಸ್ಪತ್ರೆ ದೊಡ್ಡ ಮಟ್ಟದಲ್ಲಿ ಇದೆ ಸರಿಯಾಗಿ ವೈದ್ಯರು ಬರುತ್ತಿಲ್ಲ ಯಾವಾಗಲೂ ಬೀಗ ಹಾಕಿರುತ್ತದೆ ಎಂದು ದೂರಿದರು ಹೆಡತಲೆ ಗ್ರಾಮದಲ್ಲಿ ಮಾಜಿ ಸಂಸದ ಲೇಟ್ ಧ್ರುವನಾರಾಯಣ್ ರವರು ಗ್ರಾಮಾಂತರ ಪ್ರದೇಶದವರೆಗೆ ಹೆರಿಗೆ ಆಸ್ಪತ್ರೆಯನ್ನು ನಿರ್ಮಿಸಿದರು ಇದು ಈಗ ಕಾರ್ಯನಿರ್ವಹಿಸುತ್ತಿಲ್ಲ ಇದನ್ನು ಪುನಃ ಪ್ರಾರಂಭ ಮಾಡಿಕೊಡಬೇಕೆಂದು ಕೇಳಿಕೊಂಡರು ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಹಲವಾರು ಬೈಕ್ ಗಳು ಕಳ್ಳತನ ವಾಗುತ್ತಿದೆ ಆದ್ದರಿಂದ ಸಿಸಿ ಕ್ಯಾಮೆರಾ ಅಳವಡಿಸಿಕೆ ಬಗ್ಗೆ ಕೇಳಿಕೊಂಡರು ತಾಯಿ ಮಕ್ಕಳ ಆಸ್ಪತ್ರೆ ಹಿಂಬಾಗ ಹಳೆಯ ಕ್ವಾಟ್ರಸ್ ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು ಅದನ್ನು ಕೂಡ ಪರಿಶೀಲಿಸಿ ನೆಲಸಮ ಮಾಡಲು ಸೂಚಿಸಿದರು ಶಾಸಕರು ಎಲ್ಲವನ್ನು ಆಲಿಸಿ ಸ್ಥಳದಲ್ಲೇ ಹಲವಾರು ಸಮಸ್ಯೆಗಳನ್ನು ಅಧಿಕಾರಿಗಳಿಗೆ ತಿಳಿಸಿ ಪರಿಹರಿಸಿದರು ಮುಂದಿನ ದಿನಗಳಲ್ಲಿ ಅಂತಂತವಾಗಿ ಸಭೆ ನಡೆಸಿ ಚರ್ಚಿಸಿ ನೀವು ತಿಳಿಸಿರುವ ವಿಷಯಗಳನ್ನು ಬಗೆಹರಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ ಆಸ್ಪತ್ರೆಯ ಡಾಕ್ಟರ್‍ಗಳು ಸಿಬ್ಬಂದಿಗಳು ಸುವರ್ಣ ಭವ್ಯ ಮಂಜುಳಾ ಈಶ್ವರ ಶಿವಪ್ರಸಾದ್, ಅಭಿಷೇಕ್ ವಿಜಯ್ ನರಸಿಂಹ, ಅನಿತಾ ಸುಮ ಸಮಿತಿಯ ಸದಸ್ಯರಾದ ಶಿವಕುಮಾರ್ ಮಣಿಕಂಠ ನಾಗರಾಜ್ ರವರು, ಮಹೇಶ್ ಮಾದು ಮಾಲಿನಿ ಬೈರ ನಾಯಕ ರವರು, ಪ್ರಭುಸ್ವಾಮಿ ಸೇರಿದಂತೆ ವೈದ್ಯಧಿಕಾರಿಗಳು ಮತ್ತು ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.