ಎಸ್ಸಿ ಎಸ್ಟಿ ಕೈಗಾರಿಕೋದ್ಯಮಗಳ ಬೇಡಿಕೆ ಈಡೇರಿಕೆ ಪ್ರಯತ್ನಿಸುವೆ: ತಿಮ್ಮಯ್ಯ
ಸಂಜೆವಾಣಿ ನ್ಯೂಸ್
ಮೈಸೂರು: ಸೆ.26:– ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಪ್ರಕ್ಯೂರ್‍ಮೆಂಟ್‍ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿದಾರರಿಗೆ ಕೇಂದ್ರದ ಶೇ.4ರಷ್ಟು ಮತ್ತು ರಾಜ್ಯದಲ್ಲಿ ಶೇ.10ರಷ್ಟು ಮೀಸಲಾತಿ ಕೊಡಿಸಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಭರವಸೆ ನೀಡಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಪವರ್ ಗ್ರಿಡ್ ಕಾಪೆರ್Çರೇಷನ್ ಆ? ಇಂಡಿಯಾ, ರಾಷ್ಟ್ರೀಯ ಎಸ್.ಸಿ/ಎಸ್.ಟಿ ಹಬ್ ಬುಧವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ- ಪಂಗಡದ ಉದ್ಯಮಿದಾರರಿಗೆ ವಿಶೇಷ ಮಾರಾಟಗಾರರ ಅಭಿವೃದ್ಧಿ ಮತ್ತು ಇ-ಟೆಂಡರ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿದರು. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಬೇಡಿಕೆಗಳನ್ನು ತರಲಾಗುವುದು. ಜೊತೆಗೆ ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮತ್ತು ಕೈಗಾರಿಕ ಸಚಿವ ಎಂ.ಬಿ.ಪಾಟೀಲ್ ಅವರ ನೇತೃತ್ವದಲ್ಲಿ ಸಭೆ ನಡೆಸಿ ಬೇಡಿಕೆಗಳನ್ನು ಈಡೇರಿಸಲು ಪ್ರಯಾಣಿಕ ಪ್ರಯತ್ನ ಮಾಡುವೆ ಎಂದು ಭರವಸೆ ನೀಡಿದರು.
ಸಹಕಾರ ಸಂಘದ ಹೆಚ್ಚಿನ ವ್ಯಾಪಾರ ಅಭಿವೃದ್ಧಿಗೆ 4ಜಿ ವಿನಾಯಿತಿ, ಎಸ್‍ಸಿಪಿ, ಟಿಎಸ್‍ಪಿ ಹಣದಲ್ಲಿ 50 ಕೋಟಿ ರೂ.ಗಳನ್ನು ಸಹಕಾರ ಸಂಘದ ಷೇರು ಬಂಡವಾಳ ಕೊಡಿಸುವುದು ಮತ್ತು ಪರಿಶಿಷ್ಟರ ಉದ್ಯಮ ಸ್ಥಾಪಿಸಲು ಅನುವಾಗುವಂತೆ ಕೈಗಾರಿಕಾ ಅಭಿವೃದ್ಧಿ ಮಂಡಳಿಯಿಂದ ಬಾಕಿ ಇರುವ ಕೈಗಾರಿಕಾ ನಿವೇಶನಗಳನ್ನು ಹಂಚಿಕೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಶಿಕ್ಷಣ ವಂಚಿತವಾಗಿದ್ದ ಶೋಷಿತರು ಇದೀಗ ತೆವಳುತ್ತ ಹೋಗುತ್ತಿದ್ದೇವೆ. ಆದರೆ, ಕೈಗಾರಿಕೋದ್ಯಮದಲ್ಲಿ ಬೆರಳಿಕೆಷ್ಟು ಪರಿಶಿಷ್ಟರ ಪ್ರಾತಿನಿಧ್ಯವಿಲ್ಲ. ಹೀಗಾಗಿ ಈ ಕ್ಷೇತ್ರದಲ್ಲಿ ಶೋಷಿತ ಸಮುದಾಯಗಳು ಗುರುತಿಸಿಕೊಳ್ಳಬೇಕು. ಶಿಕ್ಷಣ, ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದರೂ ಪರಿಶಿಷ್ಟರು ಕೈಗಾರಿಕಾ ಕ್ಷೇತ್ರದಲ್ಲಿ ಹಿಂದುಳಿದಿದ್ದಾರೆ. ಉದ್ಯಮಿಗಳು ಇಲ್ಲಿನ ಕಠಿಣ ಸವಾಲು ಎದುರಿಸಿ ಸಾಧನೆ ಮಾಡಬೇಕಿದೆ. ಪರಿಶಿಷ್ಟರ ಪರಿಶ್ರಮದ ಮೇಲೆ ಭವಿಷ್ಯ ನಿಂತಿದೆ. ಪರಿಶಿಷ್ಟರು, ಮಹಿಳೆ?ಂರು ಉದ್ಯಮಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಟಿಸಬೇಕು. ಪರಿಣತರು, ಪರಿಶ್ರಮದ ಜೊತೆಗೆ ಹಣಕಾಸು ಬೇಕು. ಒಂದು ಬಾರಿ ಉತ್ಪನ್ನಗಳಿಗೆ ಮಾರುಕಟ್ಟೆ ಸಿಕ್ಕರೆ ಉದ್ಯಮ ತಂತಾನೆ ಬೆಳೆಯುತ್ತದೆ.
ಜಿಲ್ಲಾ ಕೈಗಾರಿಕ ಕೇಂದ್ರದ ಜಂಟಿ ನಿರ್ದೇಶಕ ಕೆ.ಶಿವಲಿಂಗಯ್ಯ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಕೈಗಾರಿಕ ಉದ್ಯಮಗಳಿಗೆ ಹಲವಾರು ಯೋಜನೆಗಳನ್ನು ರೂಪಿಸಿದೆ. ಆದರೆ, ಮಾರುಕಟ್ಟೆ ಒದಗಿಸಲು ಸರ್ಕಾರದ ವ್ಯವಸ್ಥೆ ಇಲ್ಲ. ಹೀಗಾಗಿ ಉತ್ಪನ್ನಗಳ ಮಾರುಕಟ್ಟೆ ಮಾಡಿಕೊಳ್ಳಲು ಉದ್ಯಮಿಗಳು ಶ್ರಮಿಸಬೇಕು. ಪ್ರಧಾನಿ ಮಂತ್ರಿ ಉದ್ಯೋಗ ಯೋಜನೆಯಲ್ಲಿ 50 ಲಕ್ಷದವರೆಗೆ ಉತ್ಪಾದನ ಚಟುವಟಿಕೆಗಳಿಗೆ 20 ಲಕ್ಷದವರೆಗೆ ಸೇವಾ ಚಟುವಟಿಕೆಗಳ ಆರ್ಥಿಕ ಸಹಾಯ ಧನ ನೀಡಲಾಗುತ್ತಿದೆ. ಅವಶ್ಯಕತೆ ಇರುವವರು ಇದನ್ನು ಬಳಸಿಕೊಳ್ಳಬೇಕು ಎಂದು ಇಲಾಖೆಯಲ್ಲಿನ ಸೌಲಭ್ಯಗಳನ್ನು ವಿವರಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜಿಲ್ಲಾ ಸಂಘದ ಅಧ್ಯಕ್ಷ ಆರ್.ಮಂಜುನಾಥ ಮಾತನಾಡಿ, ರಾಜ್ಯದಿಂದಲೂ ಶೇ.10 ರಷ್ಟು ಸಮುದಾಯದವರಿಗೆ ಮೀಸಲು ಕಲ್ಪಿಸಬೇಕು. ಸಹಕಾರ ಸಂಘಕ್ಕೆ 4ಜಿ ವಿನಾಯಿತಿ ಕೊಡುವುದು. 50 ಕೋಟಿ ರೂ. ಶೇರು ಬಂಡವಾಳ ಕೊಡುವುದು. ಬಾಕಿ ಇರುವ ಕೈಗಾರಿಕಾ ನಿವೇಶನ ಹಂಚಿಕೆ ಮಾಡುವಂತೆ ಕೋರಿದರು.
ಮೈಸೂರು, ಮಂಡ್ಯ, ಚಾಮರಾಜನಗರದಿಂದ 110 ಮಂದಿ ಉದ್ಯಮಿಗಳು ಭಾಗವಹಿಸಿದ್ದರು. ಪವರ್ ಗ್ರೀಡ್ ಕಾಪೆರ್Çೀರೇಷನ್ ಜಿಎಂ ದಕ್ಷಿಣ ವಿಭಾಗದ ಪಿ.ವೆಂಕಟಪತಿ, ಜಿಎಂಎನ್‍ಎಸ್‍ಐಸಿ ಆರ್.ಶವರಣಕುಮಾರ್, ರಾಷ್ಟ್ರೀಯ ಎಸ್‍ಸಿ, ಎಸ್‍ಟಿ ಹಬ್ ಶಾಲಾ ಮುಖ್ಯಸ್ಥರಾದ ಎ.ಕೋಕಿಲ, ಮೈಸೂರು ಮತ್ತು ಚಾಮರಾಜನಗರ ಕೋಪರೇಟಿವ್ ಸಂಘದ ಅಧ್ಯಕ್ಷ ವಿಜಯ ಶಂಕರ್, ಈಶ್ವರ್ ಚಕ್ಕಡಿ ಇನ್ನಿತರರು ಹಾಜರಿದ್ದರು.