ಮಾರ್ಟಳ್ಳಿ ಸೆಂಟ್ ಮೇರಿಸ್ ಶಾಲೆಯಲ್ಲಿ ಯೋಗ ದಿನಾಚರಣೆ
ಸಂಜೆವಾಣಿ ವಾರ್ತೆ
ಹನೂರು ಜೂ 22 :- ತಾಲ್ಲೂಕಿನ ಮಾರ್ಟಳ್ಳಿ ಸೆಂಟ್ ಮೇರಿಸ್ ಶಾಲೆಯಲ್ಲಿ ಯೋಗ ದಿನಾಚರಣೆ ಆಚರಿಸಲಾಯಿತು. ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಮಕ್ಕಳ ಜೊತೆ ಶಿಕ್ಷಕರು ಸೇರಿ ಯೋಗ ಮಾಡುವ ಮೂಲಕ ಯೋಗ ದಿನಾಚರಣೆ ಮಾಡಲಾಗಿಯಿತು.
ಶಾಲೆಯ ಮುಖ್ಯ ಶಿಕ್ಷಕ ಸುನಿಲ್ ಮಾರ್ಟಿನ್ ಅವರು ಮಾತನಾಡಿ ನಮ್ಮ ದೇಶ ವಿಶ್ವಕ್ಕೆ ಮತ್ತು ಇಡೀ ಮನುಕುಲಕ್ಕೆ ಯೋಗದ ಮೂಲಕ ಬಹುದೊಡ್ಡ ಕೊಡಿಗೆ ನೀಡಿದೆ. ಆರೋಗ್ಯಕರ ಜೀವನಕ್ಕೆ ಯೋಗ ಅವಶ್ಯಕತೆ ಮಾನಸಿಕ ಕಾಂತಿ ದೈಹಿಕ ಬೆಳವಣಿಗೆಗೆ ಯೋಗ ಸಹಕಾರಿಯಾಗಿದೆ.
ಇಂದಿನ ಒತ್ತಡ ಬದುಕಿನಲ್ಲಿ ಆರೋಗ್ಯದ ಕಡೆ ಲಕ್ಷ ವಹಿಸದೆ ಭೌತಿಕ ಸುಖದತ್ತ ಸಾಗಿದ್ದರಿಂದ ರಕ್ತದೊತ್ತಡ, ಸಕ್ಕರೆ ಕಾಯಿಲೆಗಳಂತಹ ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ.
ಮಾನಸಿಕ ಶಾಂತಿ ದೈಹಿಕ ಬೆಳವಣಿಗೆಗೆ ಯೋಗ ಸಹಕಾರಿಯಾಗಿದೆ ಪ್ರತಿಯೊಬ್ಬರು ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕ ಆಗಸ್ಟಿನ್, ಅಲೆಕ್ಸ್ ಹಾಗೂ ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.