ಶಾಸಕ ಹೆಚ್.ಟಿ.ಮಂಜು ಹುಟ್ಟುಹಬ್ಬ: ತೆಂಗಿನ ಸಸಿಗಳ ವಿತರಣೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.23: ಕ್ಷೇತ್ರದ ಶಾಸಕರು ಹಾಗೂ ಮನ್ಮುಲ್ ನಿರ್ದೇಶಕ ಹೆಚ್.ಟಿ.ಮಂಜು ರವರ ಹುಟ್ಟುಹಬ್ಬವನ್ನು ಅವರ ಅನುಪಸ್ಥಿತಿಯಲ್ಲಿ ಹೆಚ್.ಟಿ.ಮಂಜು ಅಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ದುಂಡಶೆಟ್ಟಿಲಕ್ಷ್ಮಮ್ಮ ಸಾರ್ವಜನಿಕ ಆಸ್ಪತ್ರೆಯ ಹೊರರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ರೈತರಿಗೆ ತೆಂಗಿನ ಸಸಿಗಳು, ಅಡಿಕೆ ಗಿಡಗಳು, ರೈತರಿಗೆ ಅನುಕೂಲವಾಗುವ ವಿವಿಧ ರೀತಿಯ ಸಸಿಗಳನ್ನು ವಿತರಿಸಿ ಮತ್ತು ಮಾತೃಭೂಮಿ ವೃದ್ಧಾಶ್ರಮದ ಅನಾಥರಿಗೆ ಅನ್ನಸಂತರ್ಪಣೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್‍ವಿತರಿಸಿ ಆಚರಿಸಿದರು.ಇದಕ್ಕೂ ಮುನ್ನ ಶಾಸಕರ ಸಹೋದರ ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಹೆಚ್.ಟಿ.ಲೋಕೇಶ್ ಸ್ವಗ್ರಾಮದ ಶ್ರೀಬಸವೇಶ್ವರ ದೇವಾಲಯ, ಹೊಸಹೊಳಲು ಗ್ರಾಮದ ಶ್ರೀ ಕೋಟೆ ಭೈರವೇಶ್ವರ ದೇವಾಲಯ ಹಾಗೂ ಪಟ್ಟಣದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೇಕ್ ಕತ್ತರಿಸುವ ಮೂಲಕ ಹಾಗೂ ತೆಂಗಿನ ಸಸಿಗಳನ್ನು ವಿತರಿಸಿ ಮಾತನಾಡಿದ ತಾಲ್ಲೂಕು ಜೆಡಿಎಸ್
ಅಧ್ಯಕ್ಷ ಎ.ಎನ್.ಜಾನಕಿರಾಮ್ ಕ್ಷೇತ್ರದ ಶಾಸಕರು ಅತ್ಯುತ್ತಮವಾಗಿ ಜನರ ಸೇವೆ ಮಾಡುತ್ತಿದ್ದು ಹಗಲುರಾತ್ರಿ ಎನ್ನದೆ ಕಾರ್ಯಕರ್ತರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ತಾಲ್ಲೂಕಿನ ಅಭಿವೃದ್ಧಿಗೆ ತಮ್ಮದೇ ಆದ ದೃಷ್ಟಿಕೋನ ಇಟ್ಟುಕೊಂಡು ಹಿರಿಯರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ವರ್ಷ ಬರಗಾಲದ ಪ್ರಯುಕ್ತ ತಾಲ್ಲೂಕಿನ ಜನತೆ ಸಂಕಷ್ಟದಲ್ಲಿ ಇರುವುದನ್ನು ಗಮನಿಸಿ ಹುಟ್ಟುಹಬ್ಬವನ್ನು ಮಾಡಿಕೊಳ್ಳದಿರಲು ನಿರ್ಧರಿಸಿದ್ದು ಕಾರ್ಯಕರ್ತರುಗಳ ಒತ್ತಾಯದ ಮೇರೆಗೆ ನಾವುಗಳೇ ಅವರ ಹುಟ್ಟುಹಬ್ಬವನ್ನು ಅವರ ಅನುಪಸ್ಥಿತಿಯಲ್ಲಿ ದೇವರು ಅವರಿಗೆ ತಾಲ್ಲೂಕಿನ ಬಡವರ್ಗದ ಜನರ, ದೀನದಲಿತರ ಸೇವೆ ಮಾಡಲು ಹೆಚ್ಚಿನ
ಶಕ್ತಿಯನ್ನು ಕರುಣಿಸಲಿ ಎಂದರು.
ಇದೇ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ಡಾ.ಛಾಯಾ, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ರಾಜ್ಯ ಮಾರಾಟ ಮಹಾಮಂಡಳಿಯ ನಿರ್ದೇಶಕ ಎಸ್.ಎಲ್.ಮೋಹನ್, ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್, ಮಂಜುನಾಥ್, ಅಗ್ರಹಾರಬಾಚಹಳ್ಳಿ ನಾಗೇಶ್, ತಾ.ಪಂ.ಮಾಜಿ ಸದಸ್ಯ ಮಹದೇವೇಗೌಡ, ಮೋಹನ್, ಹೇಳವೇಗೌಡ, ಕುರುಬಹಳ್ಳಿ ನಾಗೇಶ್, ರವಿಕುಮಾರ್,ವಡ್ಡರಹಳ್ಳಿ ಮಹದೇವ, ದೇವೇಗೌಡ, ಕೃಷ್ಣೇಗೌಡ, ಕಾಯಿಮಂಜೇಗೌಡ,ಶಾಸಕರ ಆಪ್ತಸಹಾಯಕರಾದ ಪ್ರತಾಪ್ ಪ್ರದೀಪ್ ಸೇರಿದಂತೆ ನೂರಾರು ಕಾರ್ಯಕರ್ತರಿದ್ದರು.