29 ರಂದು ಕಲ್ಯಾಣ ಕರ್ನಾಟಕ ಜನ ವಿರೋಧಿ 371(ಜೆ) ಕಲಂ ವಿರೋಧಿ ಶಕ್ತಿಗಳ ಖಂಡಿಸಿ ಪ್ರತಿಭಟನೆ
ಬೀದರ : ಜೂ.23: ನಗರದ ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯದಲ್ಲಿ ಪೂಜ್ಯ ಶ್ರೀ ಡಾ. ನಡೋಜ ಬಸವಲಿಂಗ ಪಟ್ಟಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ದಿನಾಂಕ 29-06-2024ರಂದು ಶನಿವಾರ ಮುಂಜಾನೆ 10.00 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ ವೃತದಲ್ಲಿ ಕಲ್ಯಾಣ ಕರ್ನಾಟಕ ಜನ ವಿರೋಧಿ 371(ಜೆ) ಕಲಂ ವಿರೋಧಿ ಮತ್ತು ಸಂವಿಧಾನ ವಿರೋಧಿ ಶಕ್ತಿಗಳಿಗೆ ಖಂಡಿಸಿ ಪ್ರತಿಭಟನೆ ಮಾಡಲು ನಿರ್ಣಯ ಅಂಗೀಕರಿಸಲಾಯಿತು.
ಸಭೆಯಲ್ಲಿ ಮೊದಲಿಗೆ ಕ.ಸಾ.ಪ. ಜಿಲ್ಲಾಧ್ಯಕ್ಷರಾದ ಹಾಗೂ ಹೋರಾಟ ಸಮಿತಿ ಸಂಯೋಜಕರಾದ ಶ್ರೀ ಸುರೇಶ ಚೆನ್ನಶೆಟ್ಟಿ ಸರ್ವರನ್ನು ಸ್ವಾಗತ ಕೋರಿ ಹೋರಾಟ ಅನಿವಾರ್ಯತೆ ಬಗ್ಗೆ ಮಾತನಾಡಿದರು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮ ದಸ್ತಿ ಮಾತನಾಡುತ್ತ ಇದೊಂದು ಭಾವನಾತ್ಮಕ ಹೋರಾಟ. ನಮ್ಮ ಭಾಗದ ಮಕ್ಕಳಿಗೆ 371(ಜೆ) ಅನುಕೂಲವಾಗುತ್ತಿದ್ದು ಇನ್ನು ಅನೇಕ ತಾಂತ್ರಿಕ ಸಮಸ್ಯೆಗಳಿವೆ. ಅದನ್ನು ಅಕ್ಷರ ಸಹ ಅನುಷ್ಠಾನವಾಗಬೇಕಾಗಿದೆ. ಆದರೆ ಬೆಂಗಳೂರಿನಲ್ಲಿ ಇತ್ತಿಚಿಗೆ ಹೊಸ ಸಂಘಟೆನೆಯೊಂದನ್ನು ಹುಟ್ಟುಹಾಕಿ ನಮ್ಮ ಭಾವನೆಗೆ ಕೆಡುಕು ಮಾಡುತ್ತಿರುವ ಪ್ರವೃತ್ತಿಗೆ ಖಂಡಿಸಬೇಕಾಗಿದೆ. ಈ ದಿಶೆಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಹೋರಾಟ ಮಾಡಲಾಗುತ್ತಿದೆ ಎಂದು ನುಡಿದರು.
ಪ್ರಗತಿಪರ ಚಿಂತಕರಾದ ಶ್ರೀ ಆರ್.ಕೆ. ಹುಡಗಿ ಮಾತನಾಡಿ ಈ ಹೋರಾಟ ನಾವೆಲ್ಲರು ಒಂದು ಸವಾಲಾಗಿ ಸ್ವೀಕರಿಸಬೇಕಾಗಿದೆ. ನಮ್ಮ ಹಕ್ಕಿಗಾಗಿ ಈ ಹೋರಾಟ ನ್ಯಾಯ ಸಮ್ಮತವಾಗಿದೆ. ಇಲ್ಲಿ ಜಾತಿ, ಮತ ಪಂಥಗಳ ಬೇಧವಿಲ್ಲದೆ ಎಲ್ಲಾ ಪ್ರಗತಿಪರ ವಿಚಾರಧಾರೆ ಹಾಗೂ ಶಿಕ್ಷಣ ಸಂಸ್ಥೆಗಳು ವಿವಿಧ ಸಂಘ ಸಂಸ್ಥೆಗಳ ಪಧಾಧಿಕಾರಿಗಳು ಒಟ್ಟಾಗಿ ಸೇರಿ ಪ್ರತಿಭಟಿಸೋಣ ಎಂದು ಮನವಿ ಮಾಡಿದರು.
ಹೋರಾಟ ಸಮಿತಿ ಗೌರವಾಧ್ಯಕ್ಷರಾದ ಶ್ರೀ ಬಸವರಾಜ ದೇಶಮುಖ ಮಾತನಾಡಿ ನಮ್ಮಲ್ಲಿ ಹೋರಾಟದ ಮನೋಭಾವನೆ ಇಲ್ಲ. ಮಕ್ಕಳ ಭವಿಷ್ಯತ್ತಿನ ಹಿತದೃಷ್ಠಿಯಿಂದ ಹೋರಾಟ ಮಾಡಲೇಬೇಕಾಗಿದೆ. ಈ ಹೋರಾಟ ಗ್ರಾಮ ಮಟ್ಟದಿಂದ ಪ್ರಾರಂಭವಾಗಿ ಎಲ್ಲಡೇ ನಮ್ಮ ಹಕ್ಕಿನ ಅನಿವಾರ್ಯತೆ ಬಗ್ಗೆ ತಿಳಿಸಿಕೊಡುವುದು ನಮ್ಮ ಆದ್ಯ ಕರ್ತವ್ಯವೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪೂಜ್ಯಶ್ರೀ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡುತ್ತ ಈ ಹೋರಾಟ ನ್ಯಾಯ ಸಮ್ಮತವಾಗಿದೆ. ಮಕ್ಕಳ ಭವಿಷ್ಯದ ಹಿತದೃಷ್ಠಿಯಿಂದ ನಾವೆಲ್ಲರು ಸೇರಿ ದಿನಾಂಕ: 29-06-2024ರಂದು ಬೀದರ ನಗರದಲ್ಲಿ ನಮ್ಮ ಸ್ವಾಭಿಮಾನಕ್ಕಾಗಿ ಪ್ರತಿಭಟಿಸೋಣ ಎಂದು ಕರೆ ಕೊಟ್ಟರು. ಈ ಸಭೆಯಲ್ಲಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಶ್ರೀ ಶಿವಶರಣಪ್ಪ, ಶ್ರೀ ಬಸವರಾಜ ಜಾಬಶೆಟ್ಟಿ, ಶ್ರೀ ಬಿ.ಜಿ. ಶೆಟಕಾರ, ಶ್ರೀ ಬಾಬು ವಾಲಿ, ಡಾ. ರಜನೀಶ ಎಸ್. ವಾಲಿ, ಶ್ರೀ ದೀಪಕ ವಾಲಿ, ಶ್ರೀ ಸೋಮಶೇಖರ ಪಾಟೀಲ ಗಾದಗಿ, ಕರ್ನಲ್ ಶರಣಪ್ಪ, ಶ್ರೀ ರೇವಣಸಿದ್ದಪ್ಪ ಜಲಾದೆ, ಶ್ರೀ ಬಸವರಾಜ ಧನ್ನೂರ, ಶ್ರೀ ಮಾರುತಿ ಬೌದ್ದೆ, ಶ್ರೀ ರಾಜು ಕಡಿಯಾಳ, ಶ್ರೀ ವಿಜಯಕುಮಾರ ಸೋನಾರೆ, ಡಾ. ಹಾವಗಿರಾವ ಮೈಲಾರೆ, ಶ್ರೀ ಮಾಳಪ್ಪ ಅಡಸಾರೆ, ಶ್ರೀ ಆಸೀಫೋದ್ದೀನ್. ಶ್ರೀ ರಾಜೇಂದ್ರ ಮಣಗೀರೆ,ಶ್ರೀ ಆನಂದ ದೇವಪ್ಪ ಶ್ರೀ ಶ್ರೀಕಾಂತ ಸ್ವಾಮಿ, ಶ್ರೀಮತಿ ಭಾರತಿ ವಸ್ತ್ರದ್ ಶ್ರೀಮತಿ ಜಯದೇವಿ ಯದಲಾಪೂರೆ, ಶ್ರೀ ಪಾರ್ವತಿ ಸೋನಾರೆ, ಶ್ರೀಮತಿ ವಿದ್ಯಾ ಬಲ್ಲೂರ, ಶ್ರೀ ಶಶಿ ಹೋಸಹಳ್ಳಿ ಶ್ರೀ ರವಿ ಸ್ವಾಮಿ ನಿರ್ಣಾ ಡಾ. ಸಿ. ಆನಂದರಾವ, ಪ್ರೊ: ಸಿದ್ರಾಮಪ್ಪ ಮಾಸಿಮಾಡೆ, ಶ್ರೀ ಅಶೋಕ ಕರಂಜಿ, ಶ್ರೀ ರೇವಣಪ್ಪ ಮೂಲಗೆ, ಶ್ರೀ ಎಸ್.ಎಂ. ಜನವಾಡಕರ, ಶ್ರೀ ನಿಜಾಮೋದ್ದೀನ್ ಶ್ರೀ ಮಹಮ್ಮದ ಮೋಜಂ ಶ್ರೀ ಚಂದ್ರಶೇಖರ ಪಾಟೀಲ್, ಶ್ರೀ ಭೀಮಾರಾ ಹಡಪದ, ಶ್ರೀ ವಿಜಯಕುಮಾರ ಡುಮ್ಮೆ, ಶ್ರೀ ಕಟ್ಟಿಮನಿ ಸುಮಂತ, ಶ್ರೀ ಸಂತೋಷ ಜೋಳದಾಪಕೆ ಶ್ರೀ ರಮೇಶ ಬಿರಾದಾರ, ಶ್ರೀ ಸಂಗಪ್ಪ ಹಿಪ್ಪಗಾಂವೆ, ಡಾ. ಸುಬ್ಬಣ್ಣ ಕರಕನಳ್ಳಿ, ಶ್ರೀ ಆನಂದ ಘಂಟೆ, ಶ್ರೀ ಅನಂತರೆಡ್ಡಿ, ಡಾ. ಶ್ರೀನಿವಾಸ ರಡ್ಡಿ, ಶ್ರೀ ಜಗದೀಶ ಬಿರಾದಾರ, ಶ್ರೀ ಗುರುನಾಥ ರಾಜಗೀರಾ ಶ್ರೀ ಸುರೇಶ ಸ್ವಾಮಿ ಶ್ರೀ ಜಾಫೇಟ್ ಕಡಿಯಾಳ ಡಾ. ಪಿ. ವಿಠ್ಠಲ ರಡ್ಡಿ ಉಪಸ್ಥಿತರಿದ್ದರು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮವನ್ನು ಶ್ರೀ ಶಿವಶಂಕರ ಟೋಕರೆ ನಿರೂಪಿಸದರೆ, ಶ್ರೀ ವಿನಯಕುಮಾರ ಮಾಳಗೆ ವಂದಿಸಿದರು.
ಕಾರ್ಯಕ್ರಮದಲ್ಲಿ ಬೀದರ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಪದಾಧೀಕಾರಿಗಳು ಪ್ರಗತಿಪರ ಚಿಂತಕರ ಸಾಹಿತಿಗಳು ವಿಚಾರವಂತರು ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದು ವಿಶೇಷ.