ರಾಜ್ಯಕ್ಕೆ ಪ್ರಥಮ ಸ್ಥಾನ ಮುಖ್ಯ ಮಂತ್ರಿ ಸಿದ್ದರಾಮಯ್ಯ ರಿಂದ ಪ್ರಶಸ್ತಿ ಪುರಸ್ಕಾರ
ಇಂಡಿ :ಜೂ.23: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಗಣಿತ ವಿಷಯದಲ್ಲಿ ಸರಾಸರಿ ಅಂಕಗಳನ್ನು ಪಡೆದ ರಾಜ್ಯದ ಒಟ್ಟು 830ವಸತಿ ಶಾಲೆಗಳಲ್ಲಿ ಕಿತ್ತೂರ್ ರಾಣಿ ಚನ್ನಮ್ಮ ಶಾಲೆಯು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು ಶಾಲೆಯ ಪ್ರಾಂಶುಪಾಲರು ಸಿ ಸಿ ಸೇಠ್ ಪತ್ರಿಕೆ ಪ್ರಕಟಣೆ ಗೆ ತಿಳಿಸಿದ್ದಾರೆ. ತಾಲೂಕಿನ ಅಂಜುಟಗಿ ಗ್ರಾಮದ ಕಿತ್ತೂರ್ ರಾಣಿ ಚನ್ನಮ್ಮ ವಸತಿ ಶಾಲೆಯು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಂಯುಕ್ತ ಅಶ್ರೇಯದಲ್ಲಿ ನಡೆದ 2023-2024ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಹಮ್ಮಿಕೊಳ್ಳಲಾದ ಸನ್ಮಾನ ಸಮಾರಂಭದಲ್ಲಿ ಗಣಿತ ಶಿಕ್ಷಕ ಶ್ರೀ ಸೈಫನ್ ಮುಲ್ಕ ಬಿಂಗೊಳಗಿ ಅವರನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಭಾ ಪುರಸ್ಕಾರ ಪ್ರಶಸ್ತಿ ಪ್ರಧಾನ ಮಾಡಿ ಪೆÇ್ರಸ್ತಾಹಿಸಿದರು.ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ಎಸ್ ಸಿ ಮಹದೇವಪ್ಪ ಹಾಗೂ ಶಾಸಕರು ಮತ್ತು ಇಲಾಖೆಯ ಅಧಿಕಾರಿಗಳು ಉಸ್ಥಿತರಿದ್ದರು. ಪ್ರಾಂಶುಪಾಲರು ಸಿ ಸಿ ಸೇಠ್, ಹಾಗೂ ಎಲ್ಲಾ ಭೋದಕ ಬೋದಕೇತರ ಸಿಬ್ಬಂದಿ ವರ್ಗದವರು ಸಾಧನೆಗೈದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕ ಸೈಫನ್ ಮುಲ್ಕ ಬಿಂಗೊಳಗಿ ಅವರನ್ನು ಶುಭ ಹಾರೈಸಿದರು.