ಜೀವನ ಮೌಲ್ಯ ಪರಿಪಾಲಿಸಿ ಸನ್ಮಾರ್ಗದಲ್ಲಿ ನಡೆಯುವುದೇ ನಿಜವಾದ ಧರ್ಮ
ಸಂಜೆವಾಣಿ ವಾರ್ತೆ
ಅಜ್ಜಂಪುರ-ಜೂ.23; ಬಹು ಜನ್ಮದ ಪುಣ್ಯ ಫಲದಿಂದ ಮಾನವ ಜೀವನ ಪ್ರಾಪ್ತವಾಗಿದೆ. ಧರ್ಮ ದರ್ಶನಗಳ ಅರಿವು ಆಚರಣೆ ಜೀವನದ ವಿಕಾಸಕ್ಕೆ ಅಡಿಪಾಯವಾಗಿವೆ. ಜೀವನ ಮೌಲ್ಯಗಳನ್ನು ಸಂಪಾದಿಸಿಕೊAಡು ಸನ್ಮಾರ್ಗದಲ್ಲಿ ನಡೆಯುವುದೇ ನಿಜವಾದ ಧರ್ಮವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು  ತಾಲೂಕಿನ ಹಣ್ಣೆ ಮಠದಲ್ಲಿ ಜರುಗಿದ ಲಿಂ.ಶಿವಾನAದ ಶ್ರೀಗಳವರ ಪುಣ್ಯ ಸ್ಮರಣೆ ಹಾಗೂ ಮರುಳಸಿದ್ಧ ಪಂಡಿತಾರಾಧ್ಯ ಶ್ರೀಗಳ ಪಟ್ಟಾಧಿಕಾರದ 5ನೇ ವರ್ಷದ ವರ್ಧಂತಿ ಮಹೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಧರ್ಮ ಮತ್ತು ದೇಶ ಮನುಷ್ಯನ ಎರಡು ಕಣ್ಣು ಇದ್ದ ಹಾಗೆ. ದೇಶ ಉಳಿದು ಬೆಳೆದರೆ ಸಂಸ್ಕೃತಿ ಸಭ್ಯತೆ ಬೆಳೆದು ಬರಲು ಸಾಧ್ಯ. ವೈಚಾರಿಕತೆಯ ಹೆಸರಿನಲ್ಲಿ ಭಾರತೀಯ ಸಂಸ್ಕೃತಿ ಕಲುಷಿತಗೊಳ್ಳಬಾರದು. ಸಾತ್ವಿಕ ಮತ್ತು ತಾತ್ವಿಕ ಚಿಂತನೆಗಳನ್ನು ಬೆಳೆಸುವುದೇ ಧರ್ಮದ ಗುರಿಯಾಗಿದೆ. ಸಕಲ ಜೀವಾತ್ಮರಿಗೆ ಸದಾ ಒಳಿತನ್ನೇ ಬಯಸಿದ ವೀರಶೈವ ಧರ್ಮ ಆದರ್ಶ ಮೌಲ್ಯಗಳನ್ನು ಬೆಳೆಸುತ್ತಾ ಬಂದಿದೆ. ಜಾತಿ ಮತ ಪಂಥ ಮೀರಿ ಭಾವೈಕ್ಯತೆಯ ಸಂದೇಶವನ್ನು ಬೋಧಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರ ಧಾರೆಗಳು ಸರ್ವ ಕಾಲಕ್ಕೂ ಅನ್ವಯಿಸುತ್ತವೆ. ವೀರಶೈವ ಧರ್ಮದಲ್ಲಿ ಶ್ರೀ ಗುರುವಿಗೆ ಬಹಳಷ್ಟು ಮಹತ್ವ ಕೊಟ್ಟಿದ್ದಾರೆ. ಜಗದ ಕತ್ತಲೆ ಕಳೆಯಲು ಸೂರ್ಯ ಬೇಕು. ಅಜ್ಞಾನವೆಂಬ ಕತ್ತಲೆ ಕಳೆಯಲು ಗುರು ಬೇಕು. ಶ್ರೀ ಗುರುವಿನಿಂದಲೇ ಸಂಸ್ಕಾರ ಸಂಸ್ಕೃತಿಗಳ ಅರಿವು ಪ್ರಾಪ್ತವಾಗುತ್ತವೆ. ಗುರು ಕಾರುಣ್ಯದಿಂದ ಜೀವನ ವಿಕಾಸಗೊಳ್ಳುತ್ತದೆ. ಲಿಂ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಆದರ್ಶ ಗುರು ಪರಂಪರೆಗೆ ಮೆರಗು ತಂದವರು. ಶಿವಾದ್ವೆöÊತ ಜ್ಞಾನ ನಿಧಿಯಾದ ಶ್ರೀಗಳು ಉತ್ತಮ ಬರಹಗಾರರು ಆಗಿದ್ದರೆಂಬುದನ್ನು ಮರೆಯುವಂತಿಲ್ಲ. ಇಂದಿನ ಪಟ್ಟಾಧ್ಯಕ್ಷರಾದ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಲಿಂಗೈಕ್ಯ ಶ್ರೀಗಳವರ ಸತ್ಯ ಸಂಕಲ್ಪಗಳನ್ನು ಸಾಕಾರಗೊಳಿಸಿ ಶ್ರೀ ಮಠವನ್ನು ಅಭಿವೃದ್ಧಿಪಡಿಸುತ್ತಿರುವುದು ಸಂತೋಷದ ಸಂಗತಿ ಎಂದರು.ನೇತೃತ್ವ ವಹಿಸಿದ ಮರುಳಸಿದ್ಧ ಪಂಡಿತಾರಾಧ್ಯ ಶ್ರೀಗಳು ಮಾತನಾಡಿ ಧರ್ಮದಲ್ಲಿ ಮಾರ್ಗವಿದೆ ವೇಗವಿಲ್ಲ. ವಿಜ್ಞಾನದಲ್ಲಿ ವೇಗವಿದೆ ಮಾರ್ಗವಿಲ್ಲ. ಇವೆರಡೂ ಸಮನ್ವಯದಿಂದ ನಡೆದರೆ ಜನ ಕಲ್ಯಾಣವಾಗುತ್ತದೆ. ವ್ಯಕ್ತಿತ್ವ ವಿಕಾಸಕ್ಕೆ ವೀರಶೈವ ಧರ್ಮ ಕೊಟ್ಟ ಕೊಡುಗೆ ಅಪಾರ. ಅಂತರAಗ ಬಹಿರಂಗ ಶುದ್ಧಿಗೆ ಆದ್ಯತೆಯನ್ನು ಕೊಟ್ಟ ವೀರಶೈವ ಧರ್ಮ ಎಲ್ಲರ ಅಭ್ಯುದಯ ಮಾಡುತ್ತಾ ಬಂದಿದೆ. ಲಿಂ.ಶಿವಾನAದ ಶ್ರೀಗಳ ಸದಿಚ್ಛೆಯಂತೆ ಶ್ರೀ ರಂಭಾಪುರಿ ಜಗದ್ಗುರುಗಳವರ ಆಶೀರ್ವಾದದಿಂದ ಶ್ರೀ ಮಠವನ್ನು ಬೆಳೆಸುತ್ತಿದ್ದೇವೆ ಎಂದರು.ಸಮಾರಂಭವನ್ನು ಉದ್ಘಾಟಿಸಿದ ಉಡುಪಿ-ಚಿಕ್ಕಮಗಳೂರು ನೂತನ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ ಪ್ರಾಪಂಚಿಕ ಸಂಬAಧಗಳು ಕೆಲವು ಸಂದರ್ಭದಲ್ಲಿ ಶಿಥಿಲಗೊಳ್ಳಬಹುದು. ಆದರೆ ಗುರು ಶಿಷ್ಯರ ಸಂಬAಧ ಯಾವಾಗಲೂ ಚಿರಂತನ ನಿತ್ಯ ನೂತನವಾದುದು. ಮಾನವ ಧರ್ಮ ಹಿರಿಮೆ ಬೋಧಿಸಿದ ಶ್ರೀ ರಂಭಾಪುರಿ ಜಗದ್ಗುರುಗಳು ನಾಡಿನೆಲ್ಲೆಡೆ ಸಾಮರಸ್ಯ ಸದ್ಭಾವನೆ ಬೆಳೆಸಲು ಶ್ರಮಿಸುತ್ತಿದ್ದಾರೆ. ಲಿಂ.ಶಿವಾನAದ ಶ್ರೀಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ಮರುಳಸಿದ್ಧ ಶ್ರೀಗಳು ಮುನ್ನಡೆಯುತ್ತಿರುವುದು ಭಕ್ತರಿಗೆ ಸಂತೋಷ ಉಂಟು ಮಾಡುತ್ತದೆ ಎಂದರು.