ಕೆರೆ-ಗೋಮಾಳ ಬಿಡದೆ ವಿದ್ಯುತ್ ಟವರ್ ಅಳವಡಿಸಿದ ಕಂಪನಿಗಳು.
ಜಗಳೂರು.ಜೂ.೨೩ :- ಮಲ್ಟಿ ನ್ಯಾಷನ್‌ನಲ್ಲಿ ಕಂಪನಿಗಳ ಹಾವಳಿಯಿಂದ ತಾಲೂಕಿನಲ್ಲಿ ಸಾವಿರಾರು ಎಕರೆ ಫಲವತ್ತಾದ ಭೂಮಿ ಕಳೆದು ಕೊಳ್ಳುತ್ತಿರುವುದು ಗಮನಕ್ಕಿದ್ದರು, ತಾಲೂಕು ಆಡಳಿತ ಜಿಲ್ಲಾಡಳಿತ ಸೇರಿದಂತೆ ಯಾವೊಬ್ಬ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜನಪ್ರತಿನಿಧಿಗಳು ಕ್ರಮಕೈಗೊಳ್ಳದೆ ಇರುವುದು ನಿಜ್ಜಕ್ಕೂ ವಿಪರ್ಯಸವಾಗಿದ್ದು, ಕೃಷಿ ಭೂಮಿಯ ಮೇಲೆ ಮಲ್ಟಿ ನ್ಯಾಷನ್‌ನಲ್ಲಿ ಕಂಪನಿಗಳ ವೈಭವದ ಸವಾರಿ ಹಾಗೂ ಕೃಷಿ ಭೂಮಿ ಕಳೆದು ಕೊಳ್ಳುವ ಸಣ್ಣ ರೈತರನ್ನು ಒಮ್ಮೆ ಕಂದಾಯ ಸಚಿವರು ಕೃಷ್ಣಬೈರೇಗೌಡರು ಆಗಮಿಸಿ ನೋಡುವು ದೊಂದೆ ಬಾಕಿ ಉಳಿದಿದೆ.ಹೌದು ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಫಲವತ್ತಾದ ಕೃಷಿ ಭೂಮಿಯಲ್ಲಿ ಖಾಸಗಿ ವಿನ್ ಫ್ಯಾನ್ ಕಂಪನಿಗಳು ಮತ್ತು.ಸೋಲಾರ್ ಕಂಪನಿಗಳು ಉದಾಹರಣೆಗೆ ಹಿರೇಮಲ್ಲನ ಹೊಳೆ ಗ್ರಾಮದ ಸ. ನಂ 89 ರ ಗೋಮಾಳ ಜಮೀನಿನಲ್ಲಿ ಹಾಗೂ ಸಣ್ಣ ನೀರವಾರಿ ಇಲಾಖೆ ಒಳಪಡುವ ಕೆರೆ ಆವರಣದ ಲ್ಲಿ ಖಾಸಗಿ ಕಂಪನಿಯೊಂದು ಆಕ್ರಮವಾಗಿ ವಿದ್ಯುತ್ ಟವರ್ ಗಳನ್ನು ಅಳವಡಿಸಿದರು , ಮಲ್ಟಿ ನ್ಯಾಷನ್‌ನ್ಲಲಿ ಕಂಪನಿಗಳು ಸೋಲಾರ್ ಹಾಗೂ ವಿಂಡ್ ಫ್ಯಾನ್ ಗಳ ಸ್ಥಾಪನೆಯಿಂದ ಅಮಾಯಕ ರೈತರಿಂದ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಹಣದಾಸೆ ತೋರಿಸಿ ಯೋಗ್ಯ ಕೃಷಿ ಭೂಮಿಯನ್ನು ಕಸಿದು ತಮ್ಮ ವ್ಯಾಪ್ತಿಯನ್ನು ದಿನದಿಂದ ದಿನಕ್ಕೆ ತಾಲೂಕಿನಲ್ಲಿ ವಿಸ್ತಾರಿ ಸಿಕೊಳ್ಳುತ್ತ ಹೋಗುತ್ತಿದ್ದರು ಯಾರೋಬ್ಬರೂ ಕ್ರಮಕ್ಕೆ ಮುಂದಾಗುತ್ತಿಲ್ಲ.ತಾಲೂಕಿನಲ್ಲಿ ಪ್ರತಿಯೊಂದು ಕಂಪನಿ ವಿಂಡ್ ಫ್ಯಾನ್ ಅಳವಡಿ ಕೆಗೆ ನಾಲ್ಕು ಸಾವಿರ ಎಕರೆ ಕೃಷಿ ಭೂಮಿಯನ್ನು ಖರೀದಿ ಮಾಡುವ ಗುರಿ ಹೊಂದಿದೆ ಅಲ್ಲದೆ ತೊರೆಸಾಲು ಭಾಗದಲ್ಲಿ ಯೇ 3 ಸಾವಿರಕ್ಕೂ ಹೆಚ್ಚು ಎಕರೆ ಭೂಮಿಯಲ್ಲಿ ಸೋಲಾರ್‌ ನ್ನು ಆಳವಡಿಸಲಾಗಿದೆ. ಅಲ್ಲದೆ ಪ್ರತಿಯೊಂದು ಖಾಸಗಿ ವಿಂಡ್ ಫ್ಯಾನ್ ಕಂಪನಿಯ 50 ಸಾವಿರ ಎಕರೆಯಲ್ಲಿ ತಾಲೂಕಿನಲ್ಲಿ ವಿಂಡ್ ಫ್ಯಾನ್ ಹಾಗೂ ಸೋಲಾರ್ ಅಳವಡಿಕೆಗೆ ಭೂಮಿ ಖರೀದಿ ಗುರಿ ಹೊಂದಿದೆ ಎಂಬವುದು ಖಾಸಗಿ ಮೂಲಗಳಿಂದ ತಿಳಿದು ಬಂದಿದೆ. ಬರೀ ಒಂದು ಕಂಪನಿಯಿಂದ 50 ಸಾವಿರ ಎಕರೆ ಭೂಮಿ ಖರೀದಿ ಗುರಿ ಹೊಂದಿದೆ ಆದರೆ ಇನ್ನೂ ಮೂರ್ನಾಕ್ಕು ಕಂಪನಿಗಳಿಂದ ಇನೇಷ್ಟು ಭೂಮಿ ಖರೀದಿ ಗುರಿ ಹೊಂದಿರಬಹುದು ಮುಂದೆ ಜಗಳೂರಿನ ರೈತರಿಗೆ ಅಂಗೈ ಅಗಲ ಭೂಮಿಯ ಸಿಗದ ಪರಿಸ್ಥಿತಿ ಅಕ್ಷರಶಃಹ ನಿಜವಾಗುವು ದು ಸಮೀಪವಿದೆ ಎಂದೆನಿಸುತ್ತದೆ.