ಉಚಿತ ತರಬೇತಿ ಪ್ರಯೋಜನ ಪಡೆದುಕೊಳ್ಳಲು ಸಲಹೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೨೩; ನಗರದ ವಿದ್ಯಾನಗರ ಬಡಾವಣೆಯಲ್ಲಿರುವ  ಜ್ಞಾನಕಾಶಿ ಐಎಎಸ್,ಕೆಎಎಸ್  ಅಕಾಡೆಮಿ ಯಲ್ಲಿ  ಸಮಾಜ ಕಲ್ಯಾಣ ಇಲಾಖೆಯಿಂದ  ಐಎಎಸ್ ಕೆ ಎಸ್ ಉಚಿತ ತರಬೇತಿಗಾಗಿ ಆಯ್ಕೆಯಾಗಿ ಬಂದಿರುವ  ವಿದ್ಯಾರ್ಥಿಗಳಿಗೆ  ಉಚಿತ ತರಬೇತಿ ಹಾಗು ಅಧ್ಯಯನ ಸಾಮಗ್ರಿಗಳ ವಿತರಣೆ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಎಸ್‌ಬಿಸಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಕೆ   ಷನ್ಮುಖ  ಮಾತನಾಡಿ ವಿದ್ಯಾರ್ಥಿಗಳು ನಿರಂತರ ಅಧ್ಯಯನದಿಂದ ತಮ್ಮ ಗುರಿಯನ್ನು ಮುಟ್ಟಬೇಕು ಆ ಕಡೆಗೆ ಗಮನ ಹರಿಸಬೇಕು ಎಂದು ಹೇಳಿದರು ಮೈಸೂರ್ ವಿಶ್ವವಿದ್ಯಾಲಯ ದಿಂದ  ಪಿ ಎಚ್ ಡಿ ಪದವಿ ಪಡೆದ  ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವೆಂಕಟೇಶ್ ಬಾಬು ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಪ್ರತಿ ದಿನದ ಓದು ನಿಮ್ಮ ಜೀವನದ ಗುರಿ ಮುಟ್ಟಲು ಸಾಧ್ಯ ಒಮ್ಮೆ ನೀವು ಉತ್ತಮ ಹುದ್ದೆಯನ್ನು ಪಡೆದುಕೊಂಡರೆ ನಿಮ್ಮ ಜೀವನ ಮಟ್ಟ ಸುಧಾರಿಸುತ್ತದೆ. ಇದರಿಂದ ಸಮಾಜದಲ್ಲಿ ಉತ್ತಮವಾದ ಗೌರವ ನಿಮ್ಮದಾಗುತ್ತದೆ ಈ ನಿಟ್ಟಿನಲ್ಲಿ ನೀವು ಯೋಚಿಸಿ ತರಬೇತಿ ಪಡೆದು ಯಶಸ್ವಿಯಾಗಿರಿ ಎಂದು ಹಾರೈಸಿದರು.