ಯೋಗದಿಂದ ಮಾನಸಿಕ ಸದೃಢತೆ

ಸಂಜೆವಾಣಿ ವಾರ್ತೆ
ದಾವಣಗೆರೆ, ಜೂ.೨೩- ತಾಲೂಕಿನ ಅಣಬೇರು ಗ್ರಾಮದ ಕನಕ ಸೆಂಟ್ರಲ್ ಸ್ಕೂಲ್‌ನಲ್ಲಿ ಅಂತಾರಾಷ್ಟಿçÃಯ ಯೋಗ ದಿನಾಚರಣೆಯ ಪ್ರಯುಕ್ತ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಮಹ್ಮದ್ ಇರ್ಫಾನ್, ಕ್ರೀಡಾ ಚಟುವಟಿಕೆಗಳಾದ ವಾಕಿಂಗ್,ಜಾಗಿAಗ್, ಧ್ಯಾನ, ಯೋಗ ಈ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ ಸದೃಢವಾಗುವುದಲ್ಲದೇ, ಮಾನಸಿಕವಾಗಿ ಸದೃಢವಾಗಲು ಅನುಕೂಲವಾಗಲಿದೆ ಎಂದು ಈ ಎಲ್ಲಾ ಚಟುವಟಿಕೆಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನ ಪಟ್ಟರೆ ಮುಂದಿನ ದಿನಗಳಲ್ಲಿ ಒಳ್ಳೆಯ ಆರೋಗ್ಯವನ್ನು ನೀವುಗಳು ಕಾಣಬಹುದಾಗಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಅಣಬೇರು ಶಿವಮೂರ್ತಿ,ದೈಹಿಕ ಶಿP್ಷÀಕರಾದ ತಿರುಮಲೇಶ್, ಶಾಲಾ ಶಿP್ಷÀಕ, ಶಿP್ಷÀಕಿಯರು, ಮಕ್ಕಳು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.