ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಪ್ರಥಮ ಚಿಕಿತ್ಸೆ ಜಾಗೃತಿ ಕಾರ್ಯಕ್ರಮ

ಸಂಜೆವಾಣಿ ವಾರ್ತೆ
ದಾವಣಗೆರೆ. ಜೂ.೨೩; ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ದಾವಣಗೆರೆ ವತಿಯಿಂದ ವಿ ಎಸ್ ಪ್ಯಾರಾ ಮೆಡಿಕಲ್ ಕಾಲೇಜು  ಸಹಯೋಗದಲ್ಲಿ ಪ್ರಥಮ ಚಿಕಿತ್ಸೆ ಜಾಗೃತಿ ಕಾರ್ಯಕ್ರಮವನ್ನು ವಿ ಎಸ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ  ಹಮ್ಮಿಕೊಳ್ಳಲಾಗಿತ್ತು. ಈ  ಕಾರ್ಯಕ್ರಮದಲ್ಲಿ  ರಾಷ್ಟ್ರೀಯ ತರಬೇತುದಾರರಾದ ಡಾ. ಕುಮಾರ್ ವಿ ಎಲ್ ಎಸ್  ತುರ್ತುಸ್ಥಿತಿಗಳ ನಿರ್ವಹಣೆ ಮತ್ತು ಜೀವ ಉಳಿಸುವ ಪ್ರಥಮ ಚಿಕಿತ್ಸೆ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು . ಇದರಲ್ಲಿ *ತುರ್ತು ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೈಗೊಳ್ಳಬೇಕಾದ  ಪ್ರಥಮ ಚಿಕಿತ್ಸೆ ಕುರಿತು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಕವಾಗಿ  ಗಾಯಾಳುಗಳನ್ನು ಪರೀಕ್ಷೆಸುವ ವಿಧಾನಗಳಾದ ಡಿಆರ್ ಎ ಬಿಸಿ, ಸಿ.ಪಿ.ಆರ್ ವಿಧಾನ, ಗಾಯಾಳುವಿಗೆ ಪಟ್ಟಿಯನ್ನು ಕಟ್ಟುವ ರೀತಿ, ಗಾಯಳುಗಳನ್ನು ಸಾಗಿಸುವ ರೀತಿ, ಬೆಂಕಿ ಅನಾಹುತವಾದಾಗ , ನೀರಿನಲ್ಲಿ ಮುಳುಗಿದಾಗ, ಸುಟ್ಟ ಗಾಯಗಳಾದಾಗ, ಹಾವು ಕಚ್ಚಿದಾಗ ಕೈಗೊಳ್ಳುವ ಮುನ್ನೆಚ್ಚರಿಕೆ ಕ್ರಮಗಳು ಈ ಮುಂತಾದ ಸನ್ನಿವೇಶಗಳಲ್ಲಿ ಎದುರಿಸುವ ಕ್ರಮಗಳ ಕುರಿತಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.ಈ ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದಾವಣಗೆರೆಯ ಸಭಾಪತಿಗಳಾದ ಡಾ. ಎ ಎಂ ಶಿವಕುಮಾರ್ ನೇತೃತ್ವದಲ್ಲಿ,  ನಿರ್ದೇಶಕರಾದ ಕುಮಾರ ಎಂ, ಶಿವಾನಂದ್ ಡಿ ಎನ್,  ಸಂಯೋಜಕರು ಮತ್ತು ಆಪ್ತಸಮಾಲೋಚಕರು ರಕ್ತನಿಧಿ ಕೇಂದ್ರ ದಾವಣಗೆರೆಯ ಶಿವಕುಮಾರ ಎನ್ ಜಿ, ಪ್ರಥಮ ಚಿಕಿತ್ಸೆ ತರಬೇತುದಾರರಾದ ದೇವರಾಜ ಎ  ಇತರರು ಇದ್ದರು.