ದೈಹಿಕ, ಮಾನಸಿಕ ಸದೃಢತೆಗೆ ಯೋಗವನ್ನು ರೂಢಿಸಿಕೊಳ್ಳಿ
ಸಂಜೆವಾಣಿವಾರ್ತೆ
ಹರಪನಹಳ್ಳಿ.ಜೂ.೨೨ : ನಿತ್ಯ ಯೋಗ ಮಾಡುವುದರಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ದಿಯಾಗುತ್ತದೆ. ಯೋಗದಿಂದ ಆಗುವ ಅನುಕೂಲ ಹಾಗೂ ಪ್ರಯೋಜನಗಳ ಬಗ್ಗೆ ನಾವು ಮನವರಿಕೆ ಮಾಡಿಕೋಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಉಷಾ ರಾಣಿ .ಆರ್ ಹೇಳಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದಲ್ಲಿ ತಾಲೂಕು ಸೇವಾ ಸಮಿತಿ, ವಕೀಲರ ಸಂಘ ಹರಪನಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟಿçÃಯ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು ಪ್ರತಿಯೊಬ್ಬರು ತಮ್ಮ ನಿತ್ಯ ಕೆಲಸದ ಒತ್ತಡದಲ್ಲಿ ಬಿಡುವು ಮಾಡಿಕೊಂಡು ಯೋಗದಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಸಾದ್ಯವಾಗುತ್ತದೆ ಇದರಿಂದ ಸದಾ ಕ್ರೀಯಾಶೀಲತೆ, ಓದು, ವೃತ್ತಿ ಸೇರಿದಂತೆ ಮಾಡುವ ಯಾವುದೇ ಕೆಲಸದಲ್ಲಿ ಏಕಾಗ್ರತೆ ಸಾಧಿಸಲು ಪೂರಕವಾಗಲಿದೆ ಎಂದರು.ಸಿವಿಲ್ ನ್ಯಾಯಾದೀಶರಾದ ಮನು ಶರ್ಮ ಎಸ್.ಪಿ., ವಕೀಲರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ್ , ಯೋಗ ಶಿಕ್ಷಕ ಎಸ್.ಟಿ.ಲೋಕೇಶ್ ಮಾತನಾಡಿದರು. ಈ ಸಂದರ್ಭದಲಿ ವಕೀಲ ಸಂಘದ ಕಾರ್ಯದರ್ಶಿ ಜಿ.ಎಸ್.ಎಂ.ಕೊಟ್ರಯ್ಯ, ಹಿರಿಯ ವಕೀಲ ಪಿ.ಜಗದೀಶ್ ಗೌಡ್ರು, ಎಂ.ಮೃತAಜಯ್ಯ, ಬಿ.ಹಾಲೇಶ್, ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯರಾದ ಕೊಟ್ರೇಶ್, ಬಸವರಾಜ ಸೇರಿದಂತೆ ಉಭಯ ನ್ಯಾಯಾಲಯದ ವಕೀಲರು, ಸಿಬ್ಬಂಧಿಗಳು ಹಾಜರಿದ್ದರು.