ವೆಬ್‌ಕಾಸ್ಟ್ ವ್ಯವಸ್ಥೆಯಲ್ಲಿ ಸುಗಮವಾಗಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆ-2
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜೂ.೨೩: ಜೂನ್ 14 ರಿಂದ 22 ರವರೆಗೆ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆ-2 ಜಿಲ್ಲೆಯಲ್ಲಿ ಸುಗಮವಾಗಿ ನಡೆಯಿತು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ನಾಸಿರುದ್ದೀನ್ ಹೇಳಿದರು. ನಗರದ ಡಯಟ್‌ನಲ್ಲಿ ವೆಬ್‌ಕಾಸ್ಟ್ ಮೂಲಕ ಜಿಲ್ಲೆಯ ಪರೀಕ್ಷಾ ಕೇಂದ್ರಗಳನ್ನು ವೀಕ್ಷಿಸಿ ಮಾತನಾಡಿದ ಅವರು ಪರೀಕ್ಷೆ ಸುಗಮವಾಗಿ ನಡೆಸಲು ಡಯಟ್ ಕೇಂದ್ರದಲ್ಲಿ ವೆಬ್‌ಕಾಸ್ಟ್ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲೆಯಲ್ಲಿ ಒಟ್ಟು 19 ಪರೀಕ್ಷಾ ಕೇಂದ್ರಗಳಿದ್ದು ಪ್ರತಿಯೊಂದು ಪರೀಕ್ಷಾ ಕೇಂದ್ರಗಳ ಪ್ರತಿ ಕೊಠಡಿಯನ್ನು ವೀಕ್ಷಿಸಲು ವೆಬ್‌ಕಾಸ್ಟ್ ವೀಕ್ಷಕರಿಗೆ ಒಂದೇ ಕೊಠಡಿಯಲ್ಲಿ ಅವಕಾಶ ಕಲ್ಪಿಸಲಾಗಿದ್ದು ವೀಕ್ಷಕರಾಗಿ 20 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪ್ರಥಮ ಭಾಷೆ-3090, ದ್ವಿತೀಯ ಭಾಷೆ-3813, ತೃತೀಯ ಭಾಷೆ-4184, ಗಣಿತ-4965, ವಿಜ್ಞಾನ-4710, ಸಮಾಜ ವಿಜ್ಞಾನ-2941 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಮಾಹಿತಿ ನೀಡಿದರು. ಎಸ್.ಎಸ್.ಎಲ್.ಸಿ ಪರೀಕ್ಷೆ-2 ಜಿಲ್ಲಾ ನೋಡಲ್ ಅಧಿಕಾರಿ ಎನ್.ಆರ್.ತಿಪ್ಪೇಸ್ವಾಮಿ, ವೆಬ್‌ಕಾಸ್ಟ್ ಉಸ್ತುವಾರಿಯಾಗಿ ಜಿಲ್ಲಾ ಪಂಚಾಯಿತಿ ವತಿಯಿಂದ ವಿಶಾಲ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ಹೆಚ್.ಗೋವಿಂದಪ್ಪ, ಎಸ್.ಟಿ.ಸವಿತಾ ನೋಡಲ್ ಅಧಿಕಾರಿಯಾಗಿ ವೀಕ್ಷಕರಾಗಿ ಎಸ್.ಸಿ.ಪ್ರಸಾದ್, ಪೂರ್ಣಿಮಾ, ಎಚ್.ಗಿರಿಜಾ, ಸಿ.ಎಸ್.ಲೀಲಾವತಿ, ಕೆ.ಜಿ.ಪ್ರಶಾಂತ್, ಎಸ್.ಬಸವರಾಜು, ಚಂದ್ರಣ್ಣ, ಶಿವಣ್ಣ, ರೇವಣ್ಣ, ಶ್ರೀನಿವಾಸ್, ತಿಪ್ಪೇರುದ್ರಪ್ಪ, ಬಸವರಾಜ್ ಓಲೇಕಾರ್, ಸಮೀರಾ, ಮಮ್ತಾಜ್, ಲಲಿತಮ್ಮ, ಕಿರಣ್ಮಯಿ, ಲೋಕೇಶ್ ಕಾರ್ಯ ನಿರ್ವಹಿಸಿದರು.
