ತೈಲ ಬೆಲೆ‌ಕೂಡಲೇ ಇಳಿಕೆ ಮಾಡಲು‌ ಒತ್ತಾಯ

ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೨೨: ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡಿರುವುದು ಜನಸಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಆದ್ದರಿಂದ ಸರ್ಕಾರ ಕೂಡಲೇ ಬೆಲೆ ಏರಿಕೆ ವಾಪಸ್ ಪಡೆಯುವಂತೆ ಜಿಲ್ಲಾ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಆಗ್ರಹಿಸಿದೆ. ಸುದ್ದಿಗೋಷ್ಠಿಯಲ್ಲಿ‌ ಈ ಬಗ್ಗೆ ಜಿಲ್ಲಾಧ್ಯಕ್ಷ ಶಹಬಾಜ್  ಖಾನ್  ಮಾತನಾಡಿ, ರಾಜ್ಯ ಸರ್ಕಾರ ಮುಂದಾಲೋಚನೆ ಇಲ್ಲದೆ ಗ್ಯಾರಂಟಿ ಘೋಷಿಸಿ ಈಗ ಹಣಕ್ಕೆ ಪರದಾಡುತ್ತಿದೆ. ಮುಂದಿನಿಂದ ೧೦೦ ರೂ ಕೊಟ್ಟು ಹಿಂದಿನಿಂದ ಬೆಲೆ ಹೆಚ್ಚಿಸಿ ೧೦೦೦ ವಸೂಲಿ‌ ಮಾಡುತ್ತಿದೆ. ಸರ್ಕಾರ ಬರಿ ವೋಟ್ ಗಾಗಿ ರಾಜ್ಯವನ್ನು ಸಲಾದಲ್ಲಿ ಮುಳುಗಿಸುತ್ತಿದೆ. ಸರ್ಕಾರಕ್ಕೆ ಬಡವರ, ಸಾಮಾನ್ಯ ಜನರ ಬಗ್ಗೆ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸರ್ಕಾರ ಕೂಡಲೇ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯನ್ನು ನಿರ್ಧಾರ ವಾಪಸ್ ಪಡೆಯಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಪಾರ್ಟಿಯ ಬಿ.ಬಿ.ಸಪೂರ, ಫರ್ಕುಂದ ಬಾನು, ವಾಸಿಂ, ಮೊಹಸಿನ್ ಇದ್ದರು.