ಕಮಲಾ ಹಂಪನಾರಿಗೆ ಶೃದ್ಧಾಂಜಲಿ
ಕಲಬುರಗಿ:ಜೂ.22: ಶನಿವಾರ ನಿಧನರಾದ ನಾಡಿನ ಹಿರಿಯ ಲೇಖಕಿ ನಾಡೋಜ ಕಮಲಾ ಹಂಪನಾ ಅವರಿಗೆ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶೃದ್ಧಾಂಜಲಿಯನ್ನು ಸಲ್ಲಿಸಿ ಗೌರವಿಸಲಾಯಿತು.
ನಂತರ ಮಾತನಾಡಿದ ಉಪನ್ಯಾಸಕ ಹಾಗೂ ಲೇಖಕ ಎಚ್.ಬಿ.ಪಾಟೀಲ, ಕಮಲಾ ಹಂಪನಾ ಅವರು ನಾಡಿನ ಹಿರಿಯ ಲೇಖಕಿಯಾಗಿ ಸಮಾಜಮುಖಿಯಾದ ಸಾಹಿತ್ಯವನ್ನು ರಚಿಸಿದ್ದಾರೆ. ಮಹಿಳೆಯರಪರ ಗಟ್ಟಿಯಾದ ಧ್ವನಿಯನ್ನು ಹೊಂದಿದ್ದರು. ಅವರ ನಿಧನ ಕನ್ನಡ ಸಾಹಿತ್ಯ ಲೋಕ ಮತ್ತು ಮಹಿಳಾ ಸಾಹಿತ್ಯ ಕ್ಷೇತ್ರಕ್ಕೆ ನಷ್ಟವಾಗಿದೆ ಎಂದರು.
ಶಿಕ್ಷಕಿ ನಿಲೊಫರ್ ಶೇಖ್ ಪುಷ್ಪನಮಗಳನ್ನು ಸಲ್ಲಿಸಿದರು. ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಶಿಕ್ಷಕರಾದ ಸೈಯದ್ ಹಮೀದ್, ಪ್ರಮುಖರಾದ ಬಸವರಾಜ ಟೆಂಗಳಿ, ವರುಣಕುಮಾರ ಚಟ್ಟಿ, ಅಸದ್ ಶೇಖ್, ಇರ್ಫಾನ್ ಶೇಖ್ ಸೇರಿದಂತೆ ಇನ್ನಿತರರು ಇದ್ದರು.