ಎಲೆಬೇತೂರಿನಲ್ಲಿ ಸ್ಕೌಟ್ಸ್-ಗೈಡ್ಸ್‌ನಿಂದ  ಯೋಗದಿನ ಆಚರಣೆ

ಎಲೆಬೇತೂರು. ಜೂ.೨೨; ಇಲ್ಲಿನ ತರಳಬಾಳು ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಶ್ರೀ ಪತಂಜಲಿ ಶಿಕ್ಷಣ ಸಮಿತಿ (ರಿ.) ದಾವಣಗೆರೆ ಇವರ ಸಹಯೋಗಲ್ಲಿ ಸ್ಕೌಟ್ಸ್-ಗೈಡ್ಸ್‌ನಿಂದ ೧೦ನೇ ಅಂತರ್ ರಾಷ್ಟ್ರೀಯ ವಿಶ್ವ ಯೋಗದಿನ ಆಚರಣೆ ಮಾಡಲಾಯಿತು.ದಾವಣಗೆರೆಯ ಶ್ರೀ ಪತಂಜಲಿ ಶಿಕ್ಷಣ ಸಮಿತಿಯ ಯೋಗಬಂಧುಗಳಾದ ಮಲ್ಲಿಕಾರ್ಜುನ ಬಿ., ಬಿ. ಜಯಣ್ಣ, ಜಯಶ್ರೀ, ಷಡಕ್ಷರಪ್ಪ ಎಂ. ಬೇತೂರು ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸವನ್ನು ಮಾಡಿಸಿದರು. ಈ ಸಂದರ್ಭದಲ್ಲಿ ತರಳಬಾಳು ಆಂಗ್ಲ ಮಾಧ್ಯಮ ಪ್ರೌಢಶಾಲೆ ಮುಖ್ಯಶಿಕ್ಷಕಿ ಶ್ರೀಮತಿ ಬಿ.ಎಂ. ಶಶಿಕಲಾ, ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಶ್ರೀಮತಿ ಬಿ.ಎಂ. ಪ್ರೇಮಾ, ಸ್ಕೌಟ್ ಮಾಸ್ಟರ್ ಪುಷ್ಪಾವತಿ ಎನ್., ಗೈಡ್ ಲೀಡರ್ ಸುನಿತಾ ಜಿ.ಆರ್. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.