ಸಂತ ಕಬೀರ ದಾಸ ಜಯಂತಿ ಆಚರಣೆ
ಕಲಬುರಗಿ:ಜೂ.22: ನಗರದ ಖಾದ್ರಿ ಚೌಕ್‍ನಲ್ಲಿರುವ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಸಂಜೆ ಸಂತ ಕಬೀರ ದಾಸ ಅವರ ಜಯಂತಿಯನ್ನು ಆಚರಿಸಲಾಯಿತು.
ಉಪನ್ಯಾಸಕ ಹಾಗೂ ಲೇಖಕ ಎಚ್.ಬಿ.ಪಾಟೀಲ ಮಾತನಾಡಿ, ಸಂತ ಕಬೀರ ದಾಸ ಅವರು, ಹಿಂದಿ ಸಾಹಿತ್ಯದಲ್ಲಿ ದೊಡ್ಡ ಹೆಸರು. ಭ್ರಾತೃತ್ವ ಸಮಾಜ ನಿರ್ಮಾಣಕ್ಕೆ ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಜಾತಿ, ಧರ್ಮ, ಮೌಢ್ಯತೆ, ಅಂಧಶೃದ್ಧೆಯಂತಹ ಸಾಮಾಜಿಕ ಸಮಸ್ಯೆಗಳಿಗೆ ತಮ್ಮ ಸಾಹಿತ್ಯದ ಮೂಲಕ ಪರಿಹಾರವನ್ನು ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಶಿಕ್ಷಕರಾದ ಸೈಯದ್ ಹಮೀದ್,ನಿಲೊಫರ್ ಶೇಖ್ ಪ್ರಮುಖರಾದ ಬಸವರಾಜ ಟೆಂಗಳಿ, ವರುಣಕುಮಾರ ಚಟ್ಟಿ, ಅಸದ್ ಶೇಖ್, ಇರ್ಫಾನ್ ಶೇಖ್ ಸೇರಿದಂತೆ ಇನ್ನಿತರರು ಇದ್ದರು.