ರೋಗಮುಕ್ತ ಸಮಾಜದ ನಿರ್ಮಾಣಕ್ಕಾಗಿ ಯೋಗಭ್ಯಾಸ ಅವಶ್ಯಕ
ಸಂಜೆವಾಣಿ ವಾರ್ತೆ
ಚಿತ್ರದುರ್ಗ: ಜೂ.೨೨; ಯೋಗ ಮತ್ತು ಧ್ಯಾನ ನಮ್ಮ ಮನಸ್ಸಿನ ಆಂತರಿಕ ಶಕ್ತಿಗಳನ್ನು ಜಾಗೃತಿಗೊಳಿಸುವ ಕ್ರಿಯೆಯಾಗಿದೆ. ಧ್ಯಾನ ದೇಹ, ಮನಸ್ಸು ಆತ್ಮಗಳನ್ನು ಒಟ್ಟುಗೂಡಿಸಿ ಆತ್ಮಾನಂದವನ್ನು ನೀಡುವುದು. ಇದು ನಮ್ಮ ಮೆದುಳಿನಲ್ಲಿ ಸುಳಿದಾಡುವ ಅನಾವಶ್ಯಕ ಆಲೋಚನೆಯನ್ನು ನಿಗ್ರಹಿಸುವುದರ ಜೊತೆಗೆ ಮನಸ್ಸಿನ ದುರಾಲೋಚನೆಗಳನ್ನು ನಿರ್ಬಂಧಿಸುವುದು.ಇಂದ್ರಿಯಗಳು ಮನಸ್ಸಿನ ಮೇಲೆ ಹಿಡಿತವನ್ನು ಸಾಧಿಸುವ ಕೌಶಲ್ಯಪೂರ್ಣ ವಿಜ್ಞಾನವೇ ಯೋಗವಾಗಿದೆ ಇಂತಹ ಅದ್ಬುತ ಕಲೆಯನ್ನು ನಮಗಾಗಿ ಮತ್ತು ಸಮಾಜದ ಆರೋಗ್ಯಕ್ಕಾಗಿ ಎಲ್ಲರೂ ಯೋಗವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು” ಎಂದು ಆಯುಷ್ ವೈದ್ಯಾಧಿಕಾರಿ ಡಾ.ವಿಜಯಲಕ್ಷ್ಮಿ ಹೇಳಿದರು.ಹತ್ತನೇ ಅಂತರಾಷ್ಟ್ರೀಯ ಸಂದರ್ಭದಲ್ಲಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯು ನಗರದ ಶ್ರೀ ಪ್ರಸನ್ನವೆಂಕಟೇಶ್ವರ ಸ್ವಾಮಿ ದೇವಸ್ಥಾನ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಯೋಗೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ದೀಪ ಬೆಳಗಿಸಿ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಇಂದಿನ ವೇಗದ ಜೀವನಶೈಲಿಯಲ್ಲಿ ಹೆಚ್ಚುತ್ತಿರುವ ಒತ್ತಡ ಮತ್ತು ಕಲುಷಿತ ವಾತಾವರಣ, ರಾಸಾಯನಿಕಯುಕ್ತ ಆಹಾರದಿಂದಾಗಿ ಅನಾರೋಗ್ಯದ ಸುಳಿಯಲ್ಲಿ ಸಿಲುಕುತ್ತಿರು ನಮ್ಮ ಬದುಕಿಗೆ ಯೋಗದ ಅಭ್ಯಾಸವು ಕ್ಷೇಮ ಮತ್ತು ನೆಮ್ಮದಿಯ ದಾರಿದೀಪವಾಗಿ ಹೊರಹೊಮ್ಮಿದೆ ಎಂದು ಅಭಿಪ್ರಾಯ ಪಟ್ಟರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಹಿರಿಯ ಯೋಗ ಶಿಕ್ಷಕ ಭರಮಸಾಗರ ತಿಪ್ಪೇಸ್ವಾಮಿಯವರು ಎಲ್ಲರಿಗೂ ಅಂತರಾಷ್ಟ್ರೀಯ ಯೋಗ ದಿನದ ಶಿಷ್ಟಾಚಾರದ ಯೋಗಭ್ಯಾಸವನ್ನು ಮಾಡಿಸಿ ನಾವು ನಮ್ಮ ಆರೋಗ್ಯ ಮಾತ್ರ ಚೆನ್ನಾಗಿಟ್ಟುಕೊಂಡರೆ ಸಾಲದು ನಮ್ಮ ಕುಟುಂಬದ ಸದಸ್ಯರು ನಮ್ಮ ಮನೆಯ ಅಕ್ಕಪಕ್ಕದವರ ಆರೋಗ್ಯ ಮತ್ತು ಇಡೀ ಸಮಾಜ ಜನರು ಆರೋಗ್ಯದಿಂದಿರಬೇಕು ಅದಕ್ಕಾಗಿ ನಾವು ಮಾತ್ರ ಯೋಗಭ್ಯಾಸ ಮಾಡಿದರೆ ಸಾಲದು ನಮ್ಮ ಜೊತೆಗೆ ಸಮಾಜದ ಇತರರನ್ನೂ ಯೋಗ ಮಾಡುವಂತೆ ಪ್ರೇರೇಪಿಸಬೇಕು ಈ ಹತ್ತನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಉದ್ದೇಶವು ಅದೇ ಆಗಿದೆ ನಮ್ಮ ದೇಶ ಸದೃಢವಾಗಿರಲು ನಾವೆಲ್ಲರೂ ರೋಗಮುಕ್ತ ಮತ್ತು ಔಷಧಮುಕ್ತ ಜೀವನ ನಡೆಸಬೇಕು ಅದಕ್ಕಾಗಿ ಎಲ್ಲರೂ ಪ್ರತಿದಿನ ಒಂದುಗಂಟೆ ಯೋಗಭ್ಯಾಸ ಮಾಡಬೇಕು.ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವಿ ಕೆ.ಅಂಬೇಕರ್ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯು ಹೊಸದಾಗಿ ಯೋಗ ಕಲಿಯಲು ಬಯಸುವ ಸಾಧಕರಿಗೆ ಎಂದಿಗೂ ಪ್ರೋತ್ಸಾಹ ನೀಡುತ್ತಾ ಬಂದಿದೆ ಅದಕ್ಕಾಗಿ ಗ್ರಾಮೀಣ ಭಾಗಗಳಲ್ಲಿ ಯೋಗದ ಮಹತ್ವವನ್ನು ಸಾರಲು ಅನೇಕ ಉಚಿತ ಯೋಗ ಶಿಬಿರಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ ನಮಗೆ ಶಿಬಿರ ನಡೆಸಲು ಸ್ಥಳ ಮತ್ತು ಯೋಗಾಸಕ್ತರನ್ನು ಸೇರಿಸಿದರೆ ಸಾಕು ನಮ್ಮ ಶಿಕ್ಷಕರು ಬಂದು ಅವರಿಗೆ  ಪ್ರತಿದಿನ ಮಾಡುವ ಯೋಗಭ್ಯಾಸವನ್ನು ಕಲಿಸಿಕೊಡುತ್ತಾರೆ ಎಲ್ಲರೂ ಕೈಜೋಡಿಸಿದರೆ ಉತ್ತಮ ಆರೋಗ್ಯವಂತ ಸಮಾಜವನ್ಜು ನಿರ್ಮಾಣ ಮಾಡಬಹುದು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಯೋಗ ಸಾಧಕರಾದ ಶ್ರೀಮತಿ ವನಜಾಕ್ಷಮ್ಮ, ನಿರ್ಮಲಾ, ತಿಪ್ಪಮ್ಮ, ನಳಿನಾ, ರೂಪ, ರೇಣುಕಾ, ಅನಸೂಯ, ಅಂಬುಜಾಕ್ಷಿ, ಅನಿತ ಭಾಗ್ಯಲಕ್ಶ್ಮಿ, ದೀಪಾ ಶೈಲಜಾರೆಡ್ಡಿ, ಸುಜಾತ, ಸುಧಾ, ಚೈತ್ರಾ, ಚಿತ್ರಾ, ಮಂಜುಳಾ, ವಸಂತಲಕ್ಷ್ಮಿ, ಮಲ್ಲಿಕಾರ್ಜುನಚಾರ್, ಶಿವಪ್ರಸಾದ್ ಇನ್ನಿತರರು ಭಾಗವಹಿಸಿದ್ದರು.ಕಾರ್ಯಕ್ರಮದ ನಂತರ ಎಲ್ಲಾ ಸಾಧಕರಿಗೆ ಮೊಳಕೆಕಾಳು ಪ್ರಸಾದ ನಿನಿಯೋಗ ಮಾಡಲಾಯಿತು.