ಜೂ. 27 ನಾಡಪ್ರಭು ಕೆಂಪೇಗೌಡ ಜಯಂತಿ
ಕಲಬುರಗಿ:ಜೂ.22:ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಾಡಪ್ರಭು ಕೆಂಪೇಗೌಡ ಅವರ ಜಯಂತಿಯನ್ನು ಆಚರಿಸಲು ಸಭೆಯಲ್ಲಿ ನಿರ್ಧಾರಿಸಲಾಯಿತು.
ಶುಕ್ರವಾರದಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಾಡ ಪ್ರಭು ಕೆಂಪೇಗೌಡ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಜಿಲ್ಲಾಧಿಕಾರಿಗಳ ಕಚೇರಿಯ ಶಿಷ್ಠಾಚಾರದ ತಹಶೀಲ್ದಾರರಾದ ಸೈಯದ್ ನಿಸಾರ ಅಹ್ಮದ್ ಅವರು ಮಾತನಾಡಿದರು. .
ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜೂನ್ 27 ರಂದು ಬೆಳಿಗ್ಗೆ 11.30 ಗಂಟೆಗೆ ನಡೆಯುವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಭಾವ ಚಿತ್ರಕ್ಕೆ ಮಾಲಾರ್ಪಣೆ ಹಾಗೂ ವೇದಿಕೆ ಹೂದಾನಿಗಳ ಮೂಲಕ ಆಲಂಕಾರ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಡಾ. ಎಸ್.ಎಂ. ಪಂಡಿತ್ ರಂಗಮಂದಿರಲ್ಲಿ ಸುತ್ತಮುತ್ತ ಸ್ವಚ್ಫತೆ ಕಾಪಾಡಿಕೊಂಡು ಹೋಗಲು ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಒಬ್ಬ ನೂರಿತ ಉಪನ್ಯಾಸಕರನ್ನು ಹಾಗೂ ಒಬ್ಬ ಸಮಿತಿಯ ಅಧ್ಯಕ್ಷರನ್ನು ಮಾಡಲು ಒಕ್ಕಲಿಗರ ಸಮುದಾಯಕ್ಕೆ ತಿಳಿಸಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಮಾತನಾಡಿ, ಅಂದು ನಡೆಯುವ ಕಾರ್ಯಕ್ರಮಕ್ಕೆ ನಾಡಗೀತೆ ಹಾಗೂ ಸಂಗೀತ ಕಾರ್ಯಕ್ರಮ ಆಯೋಜಿಸಲಾಗುವುದು. ಹಾಗೂ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಲಾಗುವುದು ಎಲ್ಲಾ ರೀತಿಯ ಸಕಲ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ಸಭೆಯ ಗಮನಕ್ಕೆ ತಂದರು.
ಸಮಾಜ ಮುಖಂಡರು ತಮ್ಮ ಅನಿಸಿಕೆಗಳು ಸಭೆಯ ಗಮನಕ್ಕೆ ತಂದರು. ಕಲಬುರಗಿ ಜಿಲ್ಲಾ ಕುಡು ಒಕ್ಕಲಿಗೆ ಅಭಿವೃದ್ಧಿ ಸೇವಾ ಸಂಘದ ರಾಜ್ಯಾಧ್ಯಕ್ಷರಾದ ಶಿವರಾಜ ಎ ಪಾಟೀಲ್, ಚಿತ್ತಾಪೂರ ಸಜಿಲ್ಲಾ ಅದ್ಯಕ್ಷ ಶಿವಯೋಗಪ್ಪ ಚಿತ್ತಾಪೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಣ್ಣ ಬಿ. ಪಾಟೀಲ್, ನಗರ ಅಧ್ಯಕ್ಷ ಕಲ್ಯಾಣರಾವ ಗಾಣೂರೆ, ಸಮಾಜ ಮುಖಂಡರುಗಳಾದ ಬಸವರಾಜ ಸರಡಗಿ, ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.