ಕೇಜ್ರೀವಾಲ್ ಗೆ ಜಾಮೀನು ಹಿನ್ನೆಲೆ ಎಎಪಿ ಸಂಭ್ರಮಾಚರಣೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೨೨: ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಮತ್ತು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕ್ರೇಜಿವಾಲ್ ಅವರಿಗೆ ಅಬಕಾರಿ ಹಗರಣದಲ್ಲಿ ಸರ್ವೋಚ್ಛ ನ್ಯಾಯಾಲಯ ಜಾಮೀನು ಮಂಜೂರು ಮಾಡಿರುವ ಕಾರಣ ಎಎಪಿ ಜಿಲ್ಲಾ ಘಟಕದಿಂದಜಿಲ್ಲಾಅಧ್ಯಕ್ಷರಾದ ಕೆ.ಎಸ್.ಶಿವಕುಮಾರಪ್ಪ ಸಮ್ಮುಖದಲ್ಲಿ ಜಯದೇವ ವೃತ್ತದಲ್ಲಿ ಪಕ್ದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.ಈ ಸಂಧರ್ಭದಲ್ಲಿ ಎಸ್ಸಿ.ಎಸ್ಸಿ ಅಧ್ಯಕ್ಷರಾದ ಪ್ರೊ. ಧರ್ಮನಾಯಕ್, ಜಿಲ್ಲಾ ಜಿಲ್ಲಾ ಕಾರ್ಯದರ್ಶಿ ಕೆ. ರವೀಂದ್ರ, ಜಿಲ್ಲಾ ಸಂಘಟನೆ ಕಾರ್ಯದರ್ಶಿಯಾದ ಶಿಡ್ಲಪ್ಪ (ಸುರೇಶ್‌), ಹರಿಹರ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಯೂಸೂಫ್ ಇತರರು ಹಾಜರಿದ್ದರು.