ಜಿ ಎಂ ವಿಶ್ವವಿದ್ಯಾಲಯದಲ್ಲಿ ಯೋಗ ದಿನಾಚರಣೆ
ಸಂಜೆವಾಣಿ ವಾರ್ತೆ
ದಾವಣಗೆರೆ. ಜೂ.೨೨; ನಗರದ ಜಿ ಎಂ ವಿಶ್ವವಿದ್ಯಾಲಯದಲ್ಲಿ ಹತ್ತನೇ ಯೋಗ ದಿನಾಚರಣೆಯನ್ನು “ಯೋಗ ಫಾರ್ ಸೆಲ್ಫ್ ಅಂಡ್ ಸೊಸೈಟಿ” ಎಂಬ ಜಾಗತಿಕ ಸಂದೇಶದೊಂದಿಗೆ  ಉಪ ಕುಲಪತಿಗಳಾದ ಡಾ. ಎಚ್.ಡಿ. ಮಹೇಶಪ್ಪ ಹಾಗೂ ಇತರರು ಗಿಡಗಳಿಗೆ ನೀರೇರೆಯುವ ಮೂಲಕ ಉದ್ಘಾಟಿಸಿದರು.ಸುಸ್ಥಿರ ಅರೋಗ್ಯ ಹಾಗೂ ಸಧೃಡ ಸಮಾಜ ನಿರ್ಮಾಣಕ್ಕೆ ಯೋಗಾಭ್ಯಾಸ ಹಾಗೂ ಪ್ರಾಣಾಯಾಮ ಸಹಕಾರಿಯಾಗಿದೆ ಎಂದು ನೆರೆದಿದ್ದ ವಿಶ್ವವಿದ್ಯಾಲಯದ ಎಲ್ಲಾ ಸಿಬ್ಬಂದಿ ವರ್ಗದವರಿಗೂ ಹಾಗೂ ವಿದ್ಯಾರ್ಥಿಗಳಿಗೂ ಸಂದೇಶವನ್ನು ಕೊಡುವುದರ ಜೊತೆ ಜೊತೆಗೆ ಪ್ರೇರೆಪಿಸಿದರು. ಕುಲಸಚಿವರಾದ ಡಾ. ಸುನೀಲ್‌ಕುಮಾರ್ ಬಿ.ಎಸ್ ರವರು ಯೋಗ ಜೀವನದ ಅವಿಭಾಜ್ಯ ಭಾಗವಾಗಲಿ ಎಂದು ತಿಳಿಸಿದರು ಹಾಗೂ ಜಿ.ಎಂ.ಐ.ಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಜಯ್ ಪಾಂಡೆ ಎಂ.ಬಿ. ರವರು ಯಾರು ಸಹ ಯೋಗವನ್ನು ನಿರ್ಲಕ್ಷ ಭಾವನೆಯಿಂದ ನೋಡದೆ ದಿನನಿತ್ಯ ಅಭ್ಯಾಸ ಮಾಡುವುದರ ಮೂಲಕ ಯೋಗ ಶಿಕ್ಷಣವನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು. ಯೋಗ ಶಿಕ್ಷಕರಾದ ಪ್ರದೀಪ್ ಕುಮಾರ್ ರವರು ಯೋಗದ ಮಹತ್ವವನ್ನು ತಿಳಿಸಿ ನೆರೆದಿದ್ದ ಎಲ್ಲರಿಗೂ ತಮ್ಮ ಮಾರ್ಗಸೂಚಿಗಳ ಆಡಿಯಲ್ಲಿ ಯೋಗಾಭ್ಯಾಸವನ್ನು ಮತ್ತು ಪ್ರಾಣಾಯಾಮವನ್ನು ಮಾಡಿಸುವುದರ ಮೂಲಕ ಯೋಗಾದಿನಾಚರಣೆಯ ಸಾರ್ಥಕತೆಯನ್ನು ಬಿತ್ತರಿಸಿದರು. ಇದೇ ಸಂದರ್ಭದಲ್ಲಿ ಜಿ ಎಂ ವಿಶ್ವವಿದ್ಯಾಲಯದ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.