ಒತ್ತಡದ ಬದುಕಿನಿಂದ ಹೊರಬರಲು ನಿತ್ಯವೂ ಯೋಗ ಮಾಡಿರಿ
ಸಂಜೆವಾಣಿ ವಾರ್ತೆ
ದಾವಣಗೆರೆ, ಜೂ.೨೨- ನಮ್ಮ ದೈನಂದಿನ ಬದುಕಿನಲ್ಲಿ ನಿತ್ಯವೂ ಒತ್ತಡದ ವಾತಾವರಣವಿದ್ದು, ನಾವು ನಮ್ಮ ಆರೋಗ್ಯವನ್ನು ಮರೆತು ಬಿಟ್ಟಿದ್ದೇವೆ. ಈ ಒತ್ತಡದ ಜೀವನ ಶೈಲಿಯಿಂದ ಹೊರಬರಲು ದಿನ ನಿತ್ಯವು ಯೋಗಾಭ್ಯಾಸವನ್ನು ಮಡಬೇಕು. ನಮ್ಮೆಲ್ಲಾ ಅನಾರೋಗ್ಯ ಸಮಸ್ಯೆಗಳಿಗೆ ಯೋಗ, ಧ್ಯಾನ, ಪ್ರಾಣಾಯಾಮಗಳು ಸರಿಯಾದ ಮಾರ್ಗ ಎಂದು ಹರಿಹರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ತುರ್ತು ಅಪಘಾತ ಚಿಕಿತ್ಸಾ ವಿಭಾಗದ ಪ್ರಸಿದ್ಧ ವೈದ್ಯಾಧಿಕಾರಿಗಳಾದ ಡಾ. ರಾಘವೇಂದ್ರ ದುರ್ಗೋಜಿಯವರು ಅಭಿಪ್ರಾಯಪಟ್ಟರು.ಅವರು  ಪ್ರಾತಃಕಾಲ ನಗರದ ದೇವರಾಜ ಅರಸ್ ಬಡಾವಣೆ ‘ಸಿ’ ಬ್ಲಾಕ್‌ನಲ್ಲಿರುವ ಆದರ್ಶ ಯೋಗ ಪ್ರತಿಷ್ಠಾನ (ರಿ), ದಾವಣಗೆರೆ ಶ್ರೀ ಮಹಾಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರ ಇಲ್ಲಿ ಆಯೋಜಿಸಲಾಗಿದ್ದ 10ನೇ ವರ್ಷದ ಅಂತಾರಾಷ್ಟಿçÃಯ ವಿಶ್ವಯೋಗ ದಿನಾಚರಣೆಯಲ್ಲಿ ಜ್ಯೋತಿ ಬೆಳಗಿಸುವುದರೊಂದಿಗೆ ಚಾಲನೆ ನೀಡಿದರು.ನನ್ನ ತಂದೆಯವರ ಸ್ಫೂರ್ತಿಯಿಂದ ನಾನು 80 ರ ದಶಕದಲ್ಲಿ ಮಲ್ಲಾಡಿಹಳ್ಳಿ ಸ್ವಾಮಿಗಳ ನೇರಶಿಷ್ಯರಾದ ದಾಸ್‌ರವರಲ್ಲಿ ಯೋಗಾಭ್ಯಾಸವನ್ನು ಕಲಿತು ಇಂದಿಗೂ ಪ್ರತಿನಿತ್ಯ ಯೋಗಾಭ್ಯಾಸವನ್ನು ಮಾಡುತ್ತಿದ್ದೇನೆ. ಯೋಗದಿಂದ ತಾಳ್ಮೆ ಎಂಬ ಪಾಠವನ್ನು ಕಲಿತಿದ್ದೇನೆ. ಯೋಗವು ಭಾರತೀಯ ಋಷಿಮುನಿಗಳು ಕೊಟ್ಟ ಆರೋಗ್ಯದ ವರದಾನವಾಗಿದೆ. ನಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕಾದರೆ ನಿತ್ಯವೂ ಯೋಗ ಸಾಧನೆ ಮಾಡಬೇಕು. ಇಂದಿನ ಜೀವನ ಶೈಲಿಗೆ ಯೋಗವು ಅತ್ಯಂತ ಅವಶ್ಯಕವಾದ ಸಾಧನವಾಗಿದೆ ಎಂದು ತಮಗಾದ ಅನುಭವವನ್ನು ಹಂಚಿಕೊAಡರು.