ಎಲೆಬೇತೂರಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಸಂಜೆವಾಣಿ ವಾರ್ತೆಎಲೆಬೇತೂರು, ಜೂ.22; ಇಲ್ಲಿನ ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆ ಮತ್ತು ಶ್ರೀ ತರಳಬಾಳು ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ದಾವಣಗೆರೆಯ ಶ್ರೀ ಪಂತಂಜಲಿ ಯೋಗ ಶಿಕ್ಷಣ ಸಮಿತಿಯ ಸಹಯೋಗದಲ್ಲಿ ಪ್ರೌಢಶಾಲಾ ಆವರಣದಲ್ಲಿ `೧೦ನೇ ಯ  ಅಂತರಾಷ್ಟ್ರೀಯ  ಯೋಗ  ದಿನಾಚರಣೆ’ಯನ್ನು ಆಚರಿಸಲಾಯಿತು. ದಾವಣಗೆರೆ ಪಂತಂಜಲಿ ಯೋಗ ಸಂಸ್ಥೆಯ ಯೋಗ ಬಂಧುಗಳಾದ ಬೇತೂರು ಮಲ್ಲಿಕಾರ್ಜುನ್, ಪಿ ಜಯಣ್ಣ, ಜಯಶ್ರೀ, ಎಂ ಷಡಕ್ಷರಪ್ಪ ಮತ್ತು ಶಾಲೆಯ ದೈಹಿಕ ಶಿಕ್ಷಕರಾದ ಎಂ ಬಿ ರವಿ ಯೋಗ ಹೇಳಿಕೊಟ್ಟರು. ಪ್ರಾಸ್ತಾವಿಕವಾಗಿ ಮಲ್ಲಿಕಾರ್ಜುನ್ ಬೇತೂರು ಯೋಗದ ಹಿನ್ನೆಲೆ, ಮಹತ್ವ ಮತ್ತು ಪ್ರಸ್ತುತ ಸಾಲಿನ ಧ್ಯೇಯವಾಕ್ಯ ಕುರಿತಂತೆ ಮಾತನಾಡಿದರು. ಸುಮಾರು ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಂದೂವರೆ ಗಂಟೆಗಳ ಕಾಲ ವಿವಿಧ ಯೋಗಾಸನ, ಧ್ಯಾನ, ಮೌನಗಳನ್ನು ಮಾಡಿದರು. ಯೋಗದಿನಾಚರಣೆಯ ಸಂದರ್ಭದಲ್ಲಿ ಮಾತ್ರ ಯೋಗ ಮಾಡದೆ ಪ್ರತಿದಿನ ಯೋಗ ಮಾಡಬೇಕು. ಈ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ರೂಪಿಸಬೇಕು ಎನ್ನುವ ಅಭಿಪ್ರಾಯ ಕೇಳಿಬಂದಿತು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಬಿ ಎಂ ಪ್ರೇಮ, ಅಧ್ಯಾಪಕರಾದ ಹೆಚ್ ಎಸ್ ದ್ಯಾಮೇಶ್, ನಾಗರಾಜ್, ಅನಿತಾ ಮತ್ತು  ಉಭಯ ಶಾಲೆಯ ಸ್ಥಳೀಯ ಸಲಹಾ ಸಮಿತಿಯ ಪದಾಧಿಕಾರಿಗಳು, ವಿದ್ಯಾರ್ಥಿಗಳು,  ಅಧ್ಯಾಪಕರು  ಮತ್ತು  ಗ್ರಾಮಸ್ಥರು  ಭಾಗವಹಿಸಿದ್ದರು. ಅಧ್ಯಾಪಕ ರವಿ ಸ್ವಾಗತಿಸಿದರೆ, ಮುಖ್ಯೋಪಾಧ್ಯಾಯಿನಿ ಶಶಿಕಲಾ ವಂದಿಸಿದರು.