ಪತಂಜಲಿ ಶಾಲೆಯಲ್ಲಿ ಯೋಗ ದಿನ ಸಂಭ್ರಮ
ಬೀದರ್: ಜೂ.22:ಶ್ರೀ ಗಣೇಶ್ವರ ಎಜುಕೇಷನ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಸಂಚಾಲಿತ ಇಲ್ಲಿಯ ಕೆ.ಇ.ಬಿ. ಕಾಲೊನಿಯ ಪತಂಜಲಿ ಪಬ್ಲಿಕ್ ಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು.
ಯೋಗ ಶಿಕ್ಷಕ ರಾಜಕುಮಾರ ಜ್ಯಾಂತಿಕರ್ ಅವರು ವಿದ್ಯಾರ್ಥಿಗಳಿಗೆ ವಿವಿಧ ಯೋಗಾಸನಗಳನ್ನು ಕಲಿಸಿದರು.
ಉದ್ಘಾಟನೆ ನೆರವೇರಿಸಿದ ಡಾ. ಸುರೇಂದ್ರ ರೊಡ್ಡೆ ಅವರು, ಆರೋಗ್ಯಯುತ ಜೀವನದಲ್ಲಿ ಯೋಗದ ಮಹತ್ವ ಕುರಿತು ಮಾತನಾಡಿದರು.
ಟ್ರಸ್ಟ್ ಅಧ್ಯಕ್ಷೆ ಉಷಾ ಮಾರುತಿ ಮೇತ್ರೆ ಅಧ್ಯಕ್ಷತೆ ವಹಿಸಿದ್ದರು. ಗೋರಕನಾಥ, ಶಿವಮಂಗಲಾ ಪಾಟೀಲ, ವನಿತಾ ಕುಲಕರ್ಣಿ, ಅನಿತಾ ಕಾಂಬಳೆ, ಶಾರದಾ ದೊಡ್ಡೆ, ಪೂಜಾ ಕೆ. ಇದ್ದರು. ಬಸವರಾಜ ಮುಗಟಾಪುರೆ ಸ್ವಾಗತಿಸಿದರು. ಮುಖ್ಯಶಿಕ್ಷಕಿ ಸುಪ್ರಿಯ ಕುಲಕರ್ಣಿ ವಂದಿಸಿದರು.