ಯೋಗ ಜಗದ ಸುಯೋಗ : ಬೀದರ ವಿ.ವಿ.ಕುಲಪತಿ ಪ್ರೊ.ಬಿ.ಎಸ್.ಬಿರಾದಾರ
ಬೀದರ :ಜೂ.22:ಮನುಷ್ಯ ಯೋಗದಿಂದ ಸಾರ್ಥಕ, ಆರೋಗ್ಯಕರ, ಸಮರ್ಥ ಜೀವನ ನಡೆಸಲು ಪೂರಕವಾಗಿದೆ. ಈ ಯೋಗ ಇಡೀ ಜಗತ್ತಿಗೆ ಸುಯೋಗವಾಗಿದೆ. ಯೋಗದಿಂದ ಸದೃಢ ಆರೋಗ್ಯ ಹೊಂದಲು ಸಾಧ್ಯ ಎಂದು ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಎಸ್.ಬಿರಾದಾರರವರು ಹೇಳಿದರು. ಅವರು ಬೀದರ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಅವರು ಮುಂದುವರೆದು ಇಂದಿನ ಆಧುನಿಕ ಯಾಂತ್ರಿಕ ಯುಗದಲ್ಲಿ ಯೋಗದ ಅವಶ್ಯಕತೆಯಿದೆ. ಇಂದಿನ ಒತ್ತಡದ ಜೀವನಶೈಲಿ, ಸಡಿಲವಾಗುತ್ತಿರುವ ಮಾನವ ಸಂಬAಧಗಳು, ಕಲಬೆರಕೆ ಆಹಾರ ಪದ್ಧತಿಯ ವೇಗದ ಯುಗದಲ್ಲಿ ದೈಹಿಕ ಮಾನಸಿಕ ಆರೋಗ್ಯದ ಅವಶ್ಯಕತೆ. ಸದೃಢ ದೇಹದಲ್ಲಿ ಮಾತ್ರ ಸದೃಢ ಮನಸ್ಸು ಇರಲು ಸಾಧ್ಯ ಹೀಗಾಗಿ ಇಡೀ ಜಗತ್ತು ಇಂದು ಯೋಗದ ಮೊರೆ ಹೋಗಿದೆ. ಹೀಗಾಗಿ ಸದೃಢ ಸಮಾಜ, ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ಯೋಗದ ಅವಶ್ಯಕತೆಯಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬೀದರ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ.ಪರಮೇಶ್ವರ ನಾಯಕರವರು ಮಾತನಾಡಿ ವಿದ್ಯಾರ್ಥಿಗಳು ಪ್ರತಿದಿನ ಯೋಗಕ್ಕಾಗಿ ಒಂದಷ್ಟು ಸಮಯ ನೀಡಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ತಿಳಿಸಿದರು. ಯೋಗದಲ್ಲಿ ಎಲ್ಲವೂ ಇದೆ, ಹೀಗಾಗಿ ಉತ್ತಮ ಆರೋಗ್ಯಕ್ಕಾಗಿ ಯೋಗ ಎಲ್ಲರೂ ಅಳವಡಿಕೊಳ್ಳಬೇಕೆಂದರು. ಅಂತರಾಷ್ಟಿçÃಯ ಯೋಗ ದಿನದ ಕಾರ್ಯಕ್ರಮವನ್ನು ಗಣಕವಿಜ್ಞಾನ ವಿಭಾಗದ ಅಧ್ಯಾಪಕರು ಹಾಗೂ ಯೋಗ, ಧ್ಯಾನದ ಸಾಧಕರಾದ ಡಾ.ನಾಗೇಶ ಸಾವಳೆಯವರು ಯೋಗವನ್ನು ಪರಿಚಯಿಸಿ ಅನೇಕ ಆಸನಗಳನ್ನು ತಿಳಿಸುತ್ತಾ ಅವುಗಳ ಮಹತ್ವವನ್ನು ಕಾರ್ಯಕ್ರಮದಲ್ಲಿ ತಿಳಿಸಿದರು. ಈ ಯೋಗ ದಿನದ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಅಧ್ಯಾಪಕ, ಅಧ್ಯಾಪಕೇತರರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.