ಕೊಡದೂರ:ಅಂತರರಾಷ್ಟ್ರೀಯ ಯೋಗ ದಿನಾಚರಣೆ
ಕಲಬುರಗಿ,ಜೂ.22-ಜಿಲ್ಲೆಯ ಕಾಳಗಿ ತಾಲ್ಲೂಕಿನ ಕೊಡದೂರ ಜಿಎಂಪಿಎಸ್ ಶಾಲೆಯಲ್ಲಿ ಶುಕ್ರವಾರ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ನಾಗೇಂದ್ರ ರಾಜಾಪುರ ಅವರು ವಿದ್ಯಾರ್ಥಿಗಳಿಗೆ ಯೋಗದ ಪ್ರಮುಖ ಆಸನಗಳಲ್ಲಿ ಅರ್ಧ ಚಕ್ರಾಸನ , ತಾಡಾಸನ, ಅರ್ಧ ಉಷ್ಟ್ರಾಸನ, ಉಷ್ಟ್ರಾಸನ, ಜಲ ನೀತಿ, ರಬ್ಬರ್ ನೀತಿ, ಕಪಾಲಭಾತಿ, ಅನುಲೋಮ ವಿಲೋಮ, ಬ್ರಹ್ಮರಿ ಪ್ರಾಣಾಯಾಮ ಮುಂತಾದ ಆಸನಗಳನ್ನು ಮಾಡಿಸಿದರು.
ಈ ಯೋಗ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳಾದ ರಾಮಾಂಜಿನಪ್ಪ ಮತ್ತು ಸಿಬ್ಬಂದಿವರ್ಗ ಮತ್ತು ಲನಿರ್ಂಗ್ ಲಿಂಕ್ಸ್ ಫೌಂಡೇಶನ್‍ನ ಎಸ್‍ಆರ್‍ಪಿ ಶಿವಕುಮಾರ್ ಮಾತನಾಡಿ, ಯೋಗಾಸನದ ಪ್ರಾಮುಖ್ಯತೆ ಮತ್ತು ಅದರ ಪ್ರಯೋಜನ ಕುರಿತು ತಿಳಿಸಿಕೊಟ್ಟರು. ಯೋಗವು ಎಲ್ಲಾ ವಯೋಮಾನದವರಿಗೂ ಅನ್ವಯವಾಗುವ ವಿಜ್ಞಾನವಾಗಿದೆ. ಚಿಕ್ಕ ವಯಸ್ಸಿನಿಂದಲೇ ಯೋಗದ ಅಭ್ಯಾಸವನ್ನು ರೂಢಿಸಿಕೊಳ್ಳುವುದು ಬಹುಶಃ ಮನಸ್ಸು-ದೇಹ-ಆತ್ಮ ಕ್ಷೇತ್ರದಲ್ಲಿ ಸಮತೋಲನ ಸಾಧಿಸಲು ಸೂಕ್ತ ಮಾರ್ಗವಾಗಿದೆ. ಆಲೋಚನಾ ಕ್ರಮವನ್ನು ಸುಧಾರಿಸುವ ಮೂಲಕ ರೋಗಗಳ ತಡೆಗಟ್ಟುವಿಕೆಯನ್ನು ಒಳಗೊಂಡಿರುವ ಸಮಗ್ರ ಆರೋಗ್ಯ, ದೇಹದಲ್ಲಿ ಶಕ್ತಿಯ ಹರಿವನ್ನು ನಿಯಂತ್ರಿಸುವುದು ಮತ್ತು ಒಳಗಿನ ದೈವಿಕತೆಯನ್ನು ಅರಿತುಕೊಳ್ಳುವುದು ಯೋಗದಿಂದ ಸಾಧ್ಯವಿದೆ ಎಂದು ತಿಳಿಸಿದರು.
ಆರ್‍ಪಿಗಳಾದ ಬಸವರಾಜ, ರೂಪಾದೇವಿ, ಸುಮಲತಾ ಹಾಜರಿದ್ದರು.