ಜೀವನು ದೇವನೊಡನೆ ಬೆರೆಯುವ ಸಂಬಂಧವೇ ಯೋಗ: ಹಾರಕೂಡ ಶ್ರೀ
ಬಸವಕಲ್ಯಾಣ:ಜೂ.22: ಜೀವನು ದೇವನೊಡನೆ ಬೆರೆಯುವ ಸಂಬಂಧವೇ ಯೋಗವಾಗಿದ್ದು ಸತ್ಯಾನ್ವೇಷಣೆಯ ಅದ್ಭುತ ಮಾರ್ಗ ವಾಗಿದೆ, ದೇಹ, ಮನಸ್ಸು, ಬುದ್ಧಿ, ಇಂದ್ರಿಯಗಳನ್ನು ನಿಯಂತ್ರಿಸಬಲ್ಲ ಶಕ್ತಿ ಯೋಗಕ್ಕಿದೆ ಎಂದು ಹಾರಕೂಡದ ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಹಾರಕೂಡ ಶ್ರಿ ಮಠದಲ್ಲಿ ಆಯೋಜಿಸಿದ ಹತ್ತನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಯೋಗಗಳಲ್ಲಿ ಶಿವ ಯೋಗ ಶ್ರೇಷ್ಠವಾಗಿದ್ದು, ಶಿವಯೋಗ ಸಾಧನೆಯಿಂದ ಮಾನವ ಆಯುಷ್ಯ ವಂತನಾಗಿ ಬೆಳೆದು ಸಮಾಜವನ್ನು ಸಬಲೀಕರಣ ಗೊಳಿಸುವಲ್ಲಿ ಯಶಸ್ವಿ ಹೊಂದುತ್ತಾನೆ.
ಯೋಗ ಕೌಶಲ್ಯಾಭಿವೃದ್ಧಿ ಮಾಡುವುದರ ಜೊತೆಗೆ ಮಹಿಳಾ ಸಬಲೀಕರಣವಾಗಿ ಅವರು ಆತ್ಮ ಚೈತನ್ಯವನ್ನು ಪಡೆದು ಸಮಾಜ ಸಶಕ್ತಿಕರಣಗೊಳಿಸಲು ಪ್ರವರ್ಧಮಾನರಾಗಿ ಬೆಳೆಯುತ್ತಾರೆ.
ಯೋಗ ವಿಶ್ವ ಸ್ವಾಸ್ಥ್ಯ ಸಮಾಜದ ಕೀಲಿ ಕೈ ಆಗಿದ್ದು, ಜಗತ್ತಿಗೆ ಭಾರತ ನೀಡಿದ ಅಮೂಲ್ಯ ಕೊಡುಗೆಯಾಗಿದೆ.
ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಬದುಕಿನಲ್ಲಿ ಸಾಮರಸ್ಯ ಮೂಡಿಸುವ ವಿಶ್ವ ಬಂದುತ್ವವನ್ನು ಎತ್ತಿ ಹಿಡಿಯುವ ಮತ್ತು ಅದನ್ನು ಪಾಲಿಸುವ ನಮ್ಮ ದೇಶ ನಿಜವಾಗಿಯೂ ವಿಶ್ವಗುರು.
ಯೋಗಾಭ್ಯಾಸ ಒಂದು ನಿರ್ದಿಷ್ಟ ದಿನಕ್ಕೆ ಸೀಮಿತವಾಗದೆ ಅದು ನಮ್ಮೆಲ್ಲರ ಬದುಕಿನ ವ್ರತವಾದಾಗ ಆರೋಗ್ಯ ಪೂರ್ಣ ವಿಶ್ವ ಸಮಾಜದ ಕನಸು ನನಸಾಗಲು ಸಾಧ್ಯ ಎಂದು ನುಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾವಿತ್ರಿ ಶರಣು ಸಲಗರ ಮಾತನಾಡಿ ಆಧುನಿಕ ಜೀವನ ಶೈಲಿಯಿಂದಾಗಿ ಅನಾರೋಗ್ಯಕ್ಕೆ ಒಳಗಾಗುತ್ತಿರುವ ಇಂದಿನ ಜನಾಂಗ ಯೋಗವನ್ನು ಜೀವನದ ಅಂಗವಾಗಿ ಸ್ವೀಕರಿಸಬೇಕಾದುದು ಅಗತ್ಯವಿದೆ.
ಹಾರಕೂಡ ಶ್ರೀಗಳ ದೂರದರ್ಶಿತ್ವದ ಸಮಾಜಮುಖಿ ಕಾರ್ಯಗಳು ಅನುಕರಣಿಯವೆಂದು ನೋಡಿದರು.
ಮಲ್ಲಿನಾಥ ಹಿರೇಮಠ ಹಾರಕೂಡ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪಾ ಗುದಗೆ, ಪ್ರದೀಪ ವಾತಡೆ, ಡಾ. ಬಸವರಾಜಸ್ವಾಮಿ ಬಸವಕಲ್ಯಾಣ, ಸೂರ್ಯಕಾಂತ ಮಠ, ವಿಜಯಕುಮಾರ ಸಂಗೋಳಗೆ, ಶಿವಶರಣ ಚೌದರಿ, ಪಂಡಿತರಾವ ದೇಗಾಂವ ಉಪಸ್ಥಿತರಿದ್ದರು.
ಬಸವಕಲ್ಯಾಣದ ಯೋಗ ಗುರು ಡಾ. ಬಸವರಾಜ ಸ್ವಾಮಿ, ಕುಮಾರಿ ಪ್ರೀಯಾ ಚನ್ನಪ್ರಕಾಶ ಬೆಳಮಗೆ ಹಾರಕೂಡ ಮತ್ತು ಬಸವಣ್ಣಪ್ಪ ಗಿಲ್ಕಿ ಅವರು ಯೋಗಾಸನ ನಡೆಸಿಕೊಟ್ಟರು.
ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನೆ ಗೀತೆ ನಡೆಸಿಕೊಟ್ಟರು.
ಅಂಬಾರಾಯ ಉಗಾಜಿ ಕೋಹಿನೂರ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.
ಮಲ್ಲಿನಾಥ ಹಿರೇಮಠ ಹಾರಕೂಡ ವಂದಿಸಿದರು.
ಚಿತ್ರ : ಹಾರಕೂಡ ಶ್ರೀಮಠದಲ್ಲಿ ಆಯೋಜಿಸಿದ ಅಂತರಾಷ್ಟ್ರೀಯ 10ನೇ ಯೋಗ ದಿನಾಚರಣೆಯನ್ನು ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಉದ್ಘಾಟಿಸಿದರು.
ಶ್ರೀಮತಿ ಸಾವಿತ್ರಿ ಶರಣು ಸಲಗರ, ಮಲ್ಲಿನಾಥ ಹಿರೇಮಠ ಹಾರಕೂಡ, ಪ್ರದೀಪ ವಾತಡೆ, ಡಾ. ಬಸವರಾಜಸ್ವಾಮಿ ಬಸವಕಲ್ಯಾಣ, ಸೂರ್ಯಕಾಂತ ಮಠ, ವಿಜಯಕುಮಾರ ಸಂಗೋಳಗೆ, ಅಂಬಾರಾಯ ಉಗಾಜಿ, ಶಿವಶರಣ ಚೌದರಿ, ಕುಮಾರಿ ಪ್ರಿಯ ಚೆನ್ನಪ್ರಕಾಶ ಬೆಳಮಗೆ, ಅಪ್ಪಣ್ಣ ಜನವಾಡ ಉಪಸ್ಥಿತರಿದ್ದರು.