ಯೋಗ ವಿಶ್ವಕ್ಕೆ ಭಾರತದ ಅತ್ಯಮೂಲ್ಯ ಕೊಡುಗೆ : ಪ್ರಕಾಶ ಮಹಾಜನ
ಅಥಣಿ: ಜೂ.22: ಪ್ರಾಚೀನ ಕಾಲದ ಋಷಿಮುನಿಗಳ ತಪಸ್ಸಿನ ಫಲ ಯೋಗ. ಅದು ಜಗತ್ತಿಗೆ ಅತ್ಯಮೂಲ್ಯ ಕೊಡುಗೆ. ವಿದ್ಯಾರ್ಥಿಗಳು ಕೂಡ ಯೋಗ ಮಾಡಿ ಸದೃಢರಾಗಿ, ಸಮೃದ್ಧ ದೇಶ ಕಟ್ಟುವಲ್ಲಿ ತೊಡಗಿಸಿಕೊಳ್ಳಿ ಎಂದು ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಪ್ರಕಾಶ ಮಹಾಜನ ಹೇಳಿದರು.
ಅಥಣಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಕನ್ನಡ ಮಾಧ್ಯಮ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ 10 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಧಾನಿ ಮೋದಿಯವರು, ಪತಂಜಲಿ ಯೋಗ ಪೀಠದ ಬಾಬಾ ರಾಮದೇವ ಮಹಾರಾಜರು ಜಗತ್ತಿನ ಮೂಲೆ ಮೂಲೆಗೂ ಯೋಗ ಶಿಕ್ಷಣ ತಲುಪಲಿ ಎನ್ನುವ ಆಶಯದೊಂದಿಗೆ ಕಾರ್ಯಪ್ರವರ್ತರಾಗಿದ್ದು ಶ್ಲಾಘನೀಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಸುನೀಲ ಶಿವಣಗಿ ಮಾತನಾಡಿದರು.
ಶಿಕ್ಷಕಿ ರೋಹಿಣಿ ಯಾದವಾಡ ಪ್ರಸ್ತಾವಿಕವಾಗಿ ಮಾತನಾಡಿದರು. ಯೋಗ ಶಿಕ್ಷಕಿ ಗೀತಾ ದಶವಂತ ಮಾರ್ಗದರ್ಶನದಲ್ಲಿ ಯೋಗ ನಡೆಯಿತು. ವಿದ್ಯಾರ್ಥಿಗಳು ತುಂಬ ಶಿಸ್ತುಬದ್ಧವಾಗಿ ಯೋಗ ಮಾಡಿದರು. ಪ್ರಾರಂಭದಲ್ಲಿ ಗಾಯಕಿ ಸುಷ್ಮಾ ನಂದಗಾಂವ ಪ್ರಾರ್ಥನೆ ಹಾಡಿದರು. ಈ ಸಮಯದಲ್ಲಿ ಸಂಸ್ಥೆಯ ಕಾರ್ಯದರ್ಶಿ ವಿಜಯಕುಮಾರ ಬುರ್ಲಿ, ಆಡಳಿತಾಧಿಕಾರಿ ಪೂಜಾ ನಾಯಿಕ, ಮುಖ್ಯಾಧ್ಯಾಪಕರಾದ ಎಂ.ಎಸ್. ದೇಸಾಯಿ, ಎಂ.ಬಿ.ಬಿರಾದರ, ವ್ಯವಸ್ಥಾಪಕ ಹನುಮಂತ ಗುಡೋಡಗಿ ಉಪಸ್ಥಿತರಿದ್ದರು. ಶಿಕ್ಷಕ ಬಿ.ಡಿ ಕೋಳಿ ಸ್ವಾಗತಿಸಿ, ನಿರೂಪಿಸಿದರು.