ಅಂತರರಾಷ್ಟ್ರೀಯ ಯೋಗ ದಿನಾಚರಣೆ
ಕೊಲ್ಹಾರ:ಜೂ.22: ಭಾರತೀಯ ಪರಂಪರೆಯ ಯೋಗ ವಿಶ್ವಕ್ಕೆ ನೀಡಿದ ಉತ್ಕøಷ್ಟ ಕೊಡುಗೆಯಾಗಿದೆ ಎಂದು ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ ಮುಖ್ಯ ಪ್ರಧಾನ ವ್ಯವಸ್ಥಾಪಕ ಬಿದ್ಯಾನಂದ ಝಾ ಹೇಳಿದರು.
ಕೂಡಗಿಯ ಉಷ್ಣ ವಿದ್ಯುತ್ ಸ್ಥಾವರದ ಮಹಾಶಕ್ತಿನಗರ ಟೌನ್‍ಶಿಪ್‍ನಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
10 ನೇ ಅಂತರರಾಷ್ಟ್ರೀಯ ಯೋಗ ದಿನವನ್ನು “ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ” ಎಂಬ ವಿಷಯದೊಂದಿಗೆ ಆಚರಿಸಲ್ಪಡುತ್ತಿದೆ. ಯೋಗವೆಂಬ ಅಮೃತವು ಮನಸ್ಸು, ದೇಹ, ಸಾಮರಸ್ಯ, ಆಲೋಚನಾ ಕ್ರಿಯೆಯ ನಡುವಿನ ಸಮತೋಲನ, ಸಂಯಮ ನೆರವೇರಿಕೆಯ ಏಕತೆಯನ್ನು ಪ್ರತಿನಿಧಿಸುತ್ತದೆ ನಮ್ಮ ಒತ್ತಡದ ಜೀವನಕ್ಕೆ ಶಾಂತಿಯನ್ನು ದೊರಕಿಸಿಕೊಡುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಶ್ರೀಮತಿ ಅಂಜು ಝಾ, ಶ್ರೀನಿವಾಸ್, ಎಸ್.ಮೂರ್ತಿ ಹಾಗೂ ಹಿರಿಯ ಅಧಿಕಾರಿಗಳು, ಸಿಐಎಸ್‍ಎಫ್ ಸಿಬ್ಬಂದಿಗಳು ಹಾಗೂ ಇನ್ನಿತರರು ಇದ್ದರು.