ಕನಕ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ
ವಿಜಯಪುರ,ಜೂ.22:ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ನೆಲೆಗೊಳ್ಳಬೇಕಾದರೆ ಆರೋಗ್ಯ ವರ್ಧಕ ಜೀವನ ಬಹಳ ಮುಖ್ಯ. ನಾವು ಆರೋಗ್ಯವಂತರಾಗಿರಬೇಕಾದರೆ ಸತತ ಯೋಗವನ್ನು ಮಾಡಬೇಕು. ಯೋಗದಿಂದ ಭೋಗದ ಜೀವನ ಸಾಧ್ಯ ಎಂದು ಕರ್ನಾಟಕ ಕನಕದಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಯಪ್ರಭು ಕೊಳಮಲಿ ಹೇಳಿದರು.
ನಗರದ ಕರ್ನಾಟಕ ಕನಕದಾಸ ಶಿಕ್ಷಣ ಸಂಸ್ಥೆಯ ಕನಕ ಪೂರ್ವ-ಪ್ರಾಥಮಿಕ ಶಾಲೆ ಮತ್ತು ನವೋದಯ ಕೋಚಿಂಗ್ ಸೆಂಟರ್Àನಲ್ಲಿ ನಡೆದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಶಿಕ್ಷಕಿ ಶ್ರೀದೇವಿ, ಲಲಿತಾ ರಾಠೋಡÀ ಹಾಗೂ ವಿದ್ಯಾರ್ಥಿ ಸಮೂಹ ಉಪಸ್ಥಿತರಿದ್ದರು.