ಶಾಸಕ ಬಸನಗೌಡ ಪಾಟೀಲ ಯತ್ನಾಳರಿಂದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ, ಅಹವಾಲು ಸ್ವೀಕಾರ
ವಿಜಯಪುರ,ಜೂ.22: ನಗರದಲ್ಲಿ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಭೂಮಿ ಪೂಜೆ ನೆರವೇರಿಸಿದರು.
ಮಹಾನಗರ ಪಾಲಿಕೆ ವಾರ್ಡ್ ನಂ.32 ರ ವ್ಯಾಪ್ತಿಯ ಅಗಸರ ಓಣಿಯಲ್ಲಿ ಲೋಕೋಪಯೋಗಿ ಇಲಾಖೆಯ ರೂ.1 ಕೋಟಿ ಅನುದಾನದಲ್ಲಿ ಜೋರಾಪುರ ಪೇಟ, ಬಣಗಾರ ಓಣಿ ಹಾಗೂ ಅಗಸರ ಓಣಿಯಲ್ಲಿ ಆಂತರಿಕ ಸಿಸಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಭೂಮಿಪೂಜೆಯ ಬಳಿಕ ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಸಮಸ್ಯೆಗಳ ಪರಿಹರಿಸುವ ಭರವಸೆ ನೀಡಿದಲ್ಲದೆ ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ಮುಖಂಡರಾದ ಮಹೇಶ ಹೇರಲಗಿ, ಸೂರಪ್ಪ ಮಿರ್ಜಿ, ರಾಜಶೇಖರ ಹುಣಶ್ಯಾಳ, ಸತೀಶ ಅಗಸರ, ಶಶಿಕಾಂತ ಜವಳಿ, ಆನಂದ ಸಲ್ಪೇಕರ, ಶಿವಾನಂದ ಗಿಡವೀರ, ವಿನೋದ ತೆಲಸಂಗ, ದ್ರಾಕ್ಷಾಯಣಿ ಮಠಪತಿ, ಮಲ್ಲಮ್ಮ ಜೋಗೂರ, ಗೀತಾ ಗಿಡವೀರ, ಅನೀತಾ ಕೇಶೆಟ್ಟಿ, ಲಿಂಗರಾಜ ಶಹಾಪುರ, ಪ್ರಶಾಂತ ಕೇಶೆಟ್ಟಿ, ಶ್ರೀಶೈಲ ಅಗಸರ, ಶಂಕರ ಬನ್ನೂರ, ಸುಧಾಕರ ಹಿರೇಮಠ, ಉಮಾಕಾಂತ ಹೇರಲಗಿ, ದಿನೇಶ ಅಗಸರ, ವಿರೇಶ ಹಿರೇಮಠ, ಸುವರ್ಣ ಕುರ್ಲೆ, ಸ್ಮೀತಾ ಹುಣಶ್ಯಾಳ, ಪಾವಡೆಪ್ಪ ಗಿಡವೀರ, ಈರಪ್ಪ ಕುರ್ಲೆ ಮತ್ತಿತರರು ಇದ್ದರು.